ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪ, ಸವದತ್ತಿಗೆ ಡಾಕ್ಟರೇಟ್ ಗೌರವ

By Mrutyunjaya Kalmat
|
Google Oneindia Kannada News

SL Bhyrappa
ಧಾರವಾಡ, ಫೆ. 9 : ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ವಿಶ್ರಾಂತ ಕುಲಪತಿ ಐ ಎಂ ಸವದತ್ತಿ, ನೇತ್ರ ತಜ್ಞ ಎಂ ಎಂ ಜೋಶಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಸೋಮವಾರ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಸನ್ಮಾನಿಸಿತು.

ಗೌರವ ಡಾಕ್ಟರೇಟ್ ಪಡೆದ ನಂತರ ಮಾತನಾಡಿದ ಎಸ್ ಎಲ್ ಭೈರಪ್ಪ, ಈ ವಿಶ್ವವಿದ್ಯಾಲಯ ಸಾಂಸ್ಕೃತಿಕವಾಗಿ ಮಹತ್ವದ ಪಡೆದ ವಿಶ್ವವಿದ್ಯಾಲಯ. ಇಲ್ಲಿಂದ ನನಗೆ ಈ ಗೌರವ ಸಿಕ್ಕಿದ್ದು ಖುಷಿ ತಂದಿದೆ ಎಂದರು. ಈ ಕ್ಷಣ ಅವಿಸ್ಮರಣೀಯ. ಈ ವಿಶ್ವವಿದ್ಯಾಲಯದ ಹುಟ್ಟಿನೊಂದಿಗೆ ಪದವಿ ಪಡೆದೆ. 1953ರಲ್ಲಿ ಬಿಎಸ್ಸಿ, 1955ರಲ್ಲಿ ಎಂಎಸ್ಸಿ ಹಾಗೂ 1961 ರಲ್ಲಿ ಪಿಎಚ್ ಡಿ ಪಡೆದುಕೊಂಡು ಇದೇ ವಿವಿಯಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದೇನೆ. ಈ ಗೌರವ ಒಂದು ರೀತಿಯಲ್ಲಿ ತವರು ಮನೆ ಕಾಣಿಕೆ. ವಿಶ್ವವಿದ್ಯಾಲಯದ ಗೌರವಕ್ಕೆ ನಾನು ಋಣಿ ಎಂದು ಡಾ ಐ ಎಂ ಸವದತ್ತಿ ಹೇಳಿದರು.

ಕರ್ನಾಟಕ ವಿವಿ ನನಗೆ ಈ ಗೌರವ ನೀಡಿದ್ದು ನನ್ನ ಸಂಪತ್ತಿಗೆ ಹಾಗೂ ಜನಪ್ರಿಯತೆಗೆ ಅಲ್ಲ. ಬಡಜನರಿಗೆ ಗುಣಮಟ್ಟದ ಸೇವೆ ನೀಡಿರುವ ಕಾರಣ. ಯಾವತ್ತೂ ಈ ವಿಶ್ವವಿದ್ಯಾಲಯಕ್ಕೆ ನಾನು ಋಣಿ ಎಂದು ನೇತ್ರ ಎಂ ಎಂ ಜೋಶಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X