ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಸುವ ದೊಣ್ಣೆ ಯಿಂದ ತಪ್ಪಿಸಿಕೊಂಡ ಬಿಟಿ ಬದನೆ

By Mrutyunjaya Kalmat
|
Google Oneindia Kannada News

BT Brinjals fate hangs in Balance in India
ನವದೆಹಲಿ, ಫೆ. 9 : ದೇಶಾದ್ಯಂತ ಭಾರಿ ವಿರೋಧ ಹಾಗೂ ಚರ್ಚೆಗೆ ಕಾರಣವಾಗಿದ್ದ ಕುಲಾಂತರಿ ಬದನೆಗೆ ಕೇಂದ್ರ ಸರಕಾರ ಸದ್ಯಕ್ಕೆ ಅನುಮತಿ ನಿರಾಕರಿಸಿದೆ. ಬಿಟಿ ಬದನೆ ಬಗ್ಗೆ ವ್ಯಾಪಕ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಕೇಂದ್ರದ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ. ಅಪಾಯಕಾರಿ ಕುಲಾಂತರಿ ಬದನೆ ವಿರೋಧಿಸಿ ನಡೆಸಿದ್ದ ಹೋರಾಟಕ್ಕೆ ಕೊನೆಗೂ ಜಯ ಸಂದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕುಲಾಂತರಿ ಬದನೆಕಾಯಿಗೆ ಭಾರತದಲ್ಲಿ ಅವಕಾಶ ಕೊಟ್ಟರೆ ದೇಶದ ಆಹಾರ ಭದ್ರತೆ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಇಡೀ ಆಹಾರ ವ್ಯವಸ್ಥೆಯನ್ನು ಬೆರಳೆಣಿಕೆಯ ಕಂಪನಿಯ ಕೈಯಲ್ಲಿಟ್ಟಂತೆ ಆಗುತ್ತದೆ ಎಂದು ರೈತ ಸಂಘಟನೆಗಳು, ನಾಗರಿಕ ಸಂಸ್ಥೆಗಳು, ಜನಸಾಮಾನ್ಯರಿಂದ ದೇಶದ್ಯಾಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಬಿಟಿ ಬದನೆಗೆ ದೇಶದಲ್ಲಿ ಅವಕಾಶ ನೀಡಬೇಕೆ, ಬೇಡವೇ ಎಂಬ ಜಿಜ್ಞಾಸೆಗೆ ಕೇಂದ್ರ ಸರಕಾರ ಸಾರ್ವಜನಿಕ ಚರ್ಚೆಗೆ ಮುಂದಾಗಿತ್ತು.

ದೇಶದ ಪ್ರಮುಖ ನಗರಗಳಲ್ಲಿ ಬಿಟಿ ಬದನೆಗೆ ಚರ್ಚೆಯನ್ನೂ ಸಹ ನಡೆಸಿತ್ತು. ಆದರೆ, ಚರ್ಚೆಯಲ್ಲಿ ಕುಲಾಂತರಿ ಬದನೆಗೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಯದಾಗಿ ಭಾರತದಲ್ಲಿ ಬಿಟಿ ಬದನೆಗೆ ಅವಕಾಶ ನೀಡುವ ಕುರಿತು ಫೆ.10ರಂದು ಅಧಿಕೃತವಾಗಿ ಘೋಷಿಸಲಾಗುವುದಾಗಿ ಕೇಂದ್ರ ತಿಳಿಸಿತ್ತು. ಇಂದು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಭಾರತದಲ್ಲಿ ಸದ್ಯಕ್ಕೆ ಬಿಟಿ ಬದನೆಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ: ಬಿಟಿ ಬದನೆ ನೋ ಎಂದ ಕೇಂದ್ರ ಸರ್ಕಾರ

ಕಳೆದ ವಾರ ನಗರದ ಸೆಂಟ್ರೆಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬಿಟಿ ಬದನೆ ಕುರಿತ ಸಂವಾದದಲ್ಲಿ ಪಾಲ್ಗೊಂಡಿದ್ದ ಸಚಿವ ಜೈರಾಮ್ ರಮೇಶ್ ಅವರು, ಬಿಟಿ ಬದನೆ ಕುರಿತ ಸಾರ್ವಜನಿಕರ ಪರ ವಿರೋಧ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಉತ್ಪಾದಕರು ಹಾಗೂ ಗ್ರಾಹಕರ ದೃಷ್ಟಿಯಿಂದ ನೋಡಿ ನಾನು ನಿರ್ಣಯ ಕೈಗೊಳ್ಳುತ್ತೇನೆ. ಯಾವುದೇ ವಿಜ್ಞಾನಿಗಳ ಗುಂಪು, ಸರ್ಕಾರೇತರ ಸಂಸ್ಥೆ ಅಥವಾ ರಾಜಕೀಯ ಪ್ರೇರಿತವಾಗಿ ನಿರ್ಧಾರ ಕೈಗೊಳುವುದಿಲ್ಲ ಎಂದಿದ್ದರು. ಆದರೆ, ಭಾಗವಹಿಸಿದ್ದವರಲ್ಲಿ ಶೇ.90ರಷ್ಟು ಜನರ ಅಭಿಪ್ರಾಯ ಬಿಟಿ ಬದನೆ ವಿರುದ್ಧವಾಗಿತ್ತು

ಕಳೆದ ಅಕ್ಟೋಬರ್ ನಲ್ಲಿ ಕುಲಾಂತರಿ ಬದನೆಯನ್ನು ವಾಣಿಜ್ಯ ಬೆಳೆಯಾಗಿ ಬೆಳಸಲು ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು. genetically modified (GM) ಬದನೆಗೆ Genetic Engineering Approval Committee ಕೂಡ ಒಪ್ಪಿಗೆ ನೀಡಿತ್ತು. ಆದರೆ, ಸಣ್ಣ ಇಳುವರಿ ರೈತರಿಗೆ ಮಾರಕ, ಅಲ್ಲದೆ ಬಿಟಿ ಬದನೆ ಸೇವನೆ ಇಂದ ಆರೋಗ್ಯಕ್ಕೆ ಹಾನಿಕರ ಎಂದು ರೈತ ಸಂಘಟನೆಗಳು ವಾದಿಸುತ್ತಾ ಬಂದಿದ್ದವು. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಜೈರಾಮ್ ರಮೇಶ್ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X