ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಐಎಎಲ್ ಬಳಿ 50 ಎಕರೆ ನೀಡಿ: ವಿಪ್ರೋ

By Mahesh
|
Google Oneindia Kannada News

Wipro seeks 50 acres in Bangalore for IT park
ಬೆಂಗಳೂರು, ಫೆ.8: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ 50 ಎಕರೆ ಭೂಮಿ ನೀಡುವಂತೆ ಭಾರತದ ಮೂರನೇ ಅತಿದೊಡ್ಡ ಸಾಫ್ಟವೇರ್ ಕಂಪೆನಿ ವಿಪ್ರೋ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಿಸ್ತರಣೆಗೊಳ್ಳುತ್ತಿರುವ ಕೈಗಾರಿಕಾ ವಲಯದಲ್ಲಿ ತಮ್ಮ ಸಂಸ್ಥೆ 50 ಎಕರೆ ಜಾಗ ನೀಡುವಂತೆ ವಿಪ್ರೋ ಸಂಸ್ಥೆ ಮನವಿ ಮಾಡಿದೆ. ಉನ್ನತ ವಲಯ ಸಮಿತಿ ಈ ಬಗ್ಗೆ ಆದಷ್ಟು ಬೇಗ ನಿರ್ಧರಿಸಲಿದೆ ಎಂದು ರಾಜ್ಯ ಕೈಗಾರಿಕಾ ಮುಖ್ಯ ಕಾರ್ಯದರ್ಶಿ ವಿಪಿ ಬಳಿಗಾರ್ ಹೇಳಿದ್ದಾರೆ.

ವಿಪ್ರೋ ಸಂಸ್ಥೆ ಈಗಾಗಲೇ ಹೊಸೂರು ರಸ್ತೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾಫ್ಟ್ ವೇರ್ ಡೆವಲಪ್ ಮೆಂಟ್ ಸೆಂಟರ್ ಹೊಂದಿದೆ. ಸರ್ಜಾಪುರ ರಸ್ತೆ ಬಳಿ ಕಾರ್ಪೋರೇಟ್ ಮುಖ್ಯ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಬಿಐಎಎಲ್ ಬಳಿಯ ಐಟಿ ಪಾರ್ಕ್ ನಲ್ಲಿ ಉದ್ದೇಶಿತ ಜಾಗ ದೊರೆತರೆ ವಿಪ್ರೋ ಸಂಸ್ಥೆಯ ಮೂರನೇ ಪ್ರಮುಖ ಕಚೇರಿ ಸ್ಥಳವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X