• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಡಿತದ ವಿರುದ್ಧ ಮಲೇಷಿಯಾ ಹಿಂದೂಗಳ ಸಮರ

By Mahesh
|

ಕೌಲಾಲಂಪುರ, ಫೆ. 8: ಕುಡಿತದ ದುಷ್ಪರಿಣಾಮಗಳ ಬಗ್ಗೆ ಯುವ ಜನತೆಗೆ ಸಾರಬೇಕು. ಕುಡಿತವನ್ನು ದೇಶದಿಂದ ನಿರ್ಮೂಲನಾ ಮಾಡಬೇಕು ಎಂದು ಮಲೇಷಿಯಾದ ಹಿಂದೂ ಸಂಘಂ(MHS) ಘೋಷಿಸಿದೆ.

ಬಾಲಕರು ಹಾಗೂ ಮಧ್ಯ ವಯಸ್ಕರು ಇತ್ತೀಚೆಗೆ ಹೆಚ್ಚಾಗಿ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ.ಈ ಕೆಟ್ಟ ಚಟದಿಂದ ಬಾಲಕರನ್ನು ಸರಿ ಮಾಡಲು 2 ದಿನಗಳ ಕಾಲ ಸೆರೆಮನೆಗೆ ದೂಡಬೇಕು ಎಂದು ಸಾಮಾಜಿಕ ಪರಿವರ್ತನಾ ಸಮಿತಿಯ ಯುವ ನೇತಾರ ಅರುಣ್ ದೊರೈಸ್ವಾಮಿ ಹೇಳಿದ್ದಾರೆ.

ಮಲೇಷಿಯಾ ಸರ್ಕಾರ ಮದ್ಯದ ಮೇಲೆ ಕಡಿಮೆ ತೆರಿಗೆ ವಿಧಿಸಿ, ಎಲ್ಲರಿಗೂ ಕೈಗೆಟುಕುವಂತೆ ಮಾಡಿದೆ. ಇದು ಬದಲಾಗಬೇಕು. ಮದ್ಯ ವ್ಯಸನಿಗಳ ಪರಿವರ್ತನೆ ಮಾಡಲು ಶಾಶ್ವತವಾದ ಯೋಜನೆ ಅಗತ್ಯವಿದೆ ಎಂದಿದ್ದಾರೆ. ಮುಸ್ಲಿಂ ಸಮುದಾಯ ಪ್ರಾಬಲ್ಯವಿರುವ ಮಲೇಷಿಯಾದಲ್ಲಿ ಹಿಂದೂ ಸಂಘಟನೆ ಧೈರ್ಯವಾಗಿ ಮದ್ಯ ವ್ಯಸನಿಗಳ ವಿರುದ್ಧ ಸಮರ ಸಾರಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X