ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಸಾಮಾನ್ಯರ ಕೈಗೆಟುಕುವ ಸಿಹಿ ದ್ರಾಕ್ಷಿ

By Mahesh
|
Google Oneindia Kannada News

HOPCOMS Grapes Mela
ಬೆಂಗಳೂರು, ಫೆ. 8:ಬೆಂಗಳೂರು ಸೇರಿದಂತೆ 16 ಪ್ರಮುಖ ಸ್ಥಳಗಳಲ್ಲಿ ಈ ಬಾರಿ ದ್ರಾಕ್ಷಿಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರಿಗೆ ಶೇ.10ರವರೆಗೆ ರಿಯಾಯಿತಿಯಲ್ಲಿ ಉತ್ತಮ ಗುಣ ಮಟ್ಟದ ನಾನಾ ತಳಿಯ ದ್ರಾಕ್ಷಿಯನ್ನು ಮಾರಾಟ ಮಾಡಲಾಗುವುದು. ಕಳೆದ ವರ್ಷ 600 ಟನ್ ದ್ರಾಕ್ಷಿ ವಹಿವಾಟು ನಡೆದಿದ್ದು, ಈ ಬಾರಿ 1,000 ಟನ್ ನಿರೀಕ್ಷೆಯಿದೆ ಎನ್ನುತ್ತಾರೆ ಹಾಪ್ ಕಾಮ್ಸ್ ಅಧ್ಯಕ್ಷ ಬಿ. ಮುನೇಗೌಡ.

ಸುವರ್ಣ ಮಹೋತ್ಸವ ಅಂಗವಾಗಿ ಫೆ.10 ರಿಂದ ನಗರದ ನಾನಾ ಹಾಪ್ ಕಾಮ್ಸ್‌ನ ಮಳಿಗೆಗಳಲ್ಲಿ ದ್ರಾಕ್ಷಿಮೇಳ ನಡೆಯಲಿದೆ. ಮೇಳವು ಮೂರು ತಿಂಗಳು ನಡೆಯುತ್ತದೆ. ಮೊದಲಿಗೆ ಹಡ್ಸನ್‌ವೃತ್ತ, ಲಾಲ್‌ಬಾಗ್, ಜಯನಗರ, ಬನಶಂಕರಿ, ರಾಜಾಜಿನಗರ, ಕೋರಮಂಗಲ, ಪದ್ಮನಾಭನಗರ, ಇಂದಿರಾನಗರ ಮುಂತಾದೆಡೆ ಜರುಗಲಿದೆ.

ಬಿಜಾಪುರ ಮತ್ತಿತರ ಕಡೆಗಳಲ್ಲಿ ಅಧಿಕ ಮಳೆಯಾಗಿರುವುದರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆಗಳಲ್ಲಿ ಶೇ.20ರಷ್ಟು ಹೆಚ್ಚಾಗಲಿವೆ. 2 ಹಾಗೂ 5 ಕೆ.ಜಿ.ಯ ಬಾಕ್ಸ್‌ಗಳಲ್ಲಿ ಹಣ್ಣುಗಳು ಲಭ್ಯವಿದ್ದು, ಎರಡು ದಿನಗಳಿಗೊಮ್ಮೆ ದರ ನಿಗದಿಪಡಿಸಲಾಗುವುದು ಎಂದು ಮುನೇಗೌಡ ಹೇಳಿದರು.

ದ್ರಾಕ್ಷಿ ದರ (ಕೆ.ಜಿ.ಗೆ)
ಬೆಂಗಳೂರು ಬ್ಲೂ- 18 ರೂ.
ಫ್ಲೇಮ್- 46 ರೂ.
ತಾಜ್ ಗಜೇಶ್-47 ರೂ.
ಥಾಮ್ಸನ್ ಸೀಡ್‌ಲೆಸ್-32 ರೂ.
ಕೃಷ್ಣ ಶರದ್-60 ರೂ.
ಶರದ್-48 ರೂ.
ದಿಲ್‌ಕುಷ್-15 ರೂ.
ಅನಾಬಿಷಾ- 15 ರೂ.
ರೆಡ್‌ಗ್ಲೋಬ್- 150 ರೂ.
ಸೊನಾಲಿಕಾ-46 ರೂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X