ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ವಸ್ತ್ರ ಸಾಮರ್ಥ್ಯದ 'ಅಗ್ನಿ' ಪ್ರಯೋಗ ಯಶಸ್ವಿ

By Rajendra
|
Google Oneindia Kannada News

Nuclear-capable Agni-III missile test-fired
ಬಾಲಸೋರ್ (ಒರಿಸ್ಸಾ), ಫೆ.7: ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ 'ಅಗ್ನಿ 3' ಖಂಡಾಂತರ ಕ್ಷಿಪಣಿಯನ್ನು ಭಾರತ ಶನಿವಾರ ಯಶಸ್ವಿಯಾಗಿ ಪ್ರಯೋಗಿಸಿತು. ಒರಿಸ್ಸಾದ ವ್ಹೀಲರ್ ದ್ವೀಪದಲ್ಲಿ 3, 000 ಕಿ.ಮೀ ಕ್ರಮಿಸಬಲ್ಲ ಸಾಮರ್ಥ್ಯವುಳ್ಳ ಅಗ್ನಿ 3 ಕ್ಷಿಪಣಿಯನ್ನು ಪರೀಕ್ಷಿಸಲಾಯಿತು.

ದೇಸೀಯವಾಗಿ ತಯಾರಿಸಿರುವ ಈ ಕ್ಷಿಪಣಿಯನ್ನು ಒರಿಸ್ಸಾ ತೀರ ಪ್ರದೇಶದಿಂದ 100 ಕಿ.ಮೀ ದೂರದಲ್ಲಿರುವ ಧಮಾರ ಎಂಬ ಪ್ರಾಂತ್ಯದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅಗ್ನಿ 3 ಕ್ಷಿಪಣಿ ಎಲ್ಲ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದ್ದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಅಗ್ನಿ 3 ಕ್ಷಿಪಣಿಯನ್ನು ಪರೀಕ್ಷಿಸುತ್ತಿರುವುದು ಇದು ನಾಲ್ಕನೆಯ ಬಾರಿ. ಅಗ್ನಿ ಕ್ಷಿಪಣಿಯ ಕಾರ್ಯಕ್ಷಮತೆಯನ್ನು ಅರಿಯಲು ಇದರಿಂದ ನೆರವಾಗುತ್ತದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅಗ್ನಿ 3 ಕ್ಷಿಪಣಿ 1.5 ಟನ್ ಗಳಷ್ಟು ಅಣ್ವಸ್ತ್ರಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X