ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ನಿಧನ

By Rajendra
|
Google Oneindia Kannada News

Bannanje Ramacharya no more
ಉಡುಪಿ, ಫೆ.7: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಹಾಗೂ ಸಾಹಿತಿ ಬನ್ನಂಜೆ ರಾಮಾಚಾರ್ಯ(93) ಅವರು ಶನಿವಾರ ನಿಧನರಾದರು. ಅವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕನ್ನಡ ಪತ್ರಿಕೋದ್ಯಮಕ್ಕೆ ಐದು ದಶಕಗಳ ಕಾಲ ಸೇವೆ ಸಲ್ಲಿಸಿದ ಘನತೆ ಬನ್ನಂಜೆ ರಾಮಾಚಾರ್ಯ ಅವರದು.

ಪತ್ನಿ, ಒಬ್ಬ ಮಗ ಹಾಗೂ ಏಳು ಮಂದಿ ಹೆಣ್ಣು ಮಕ್ಕಳನ್ನು ಬನ್ನಂಜೆ ರಾಮಾಚಾರ್ಯ ಅವರು ಅಗಲಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತ ವಿದ್ವಾನ್ ಪದವಿಯನ್ನು ಪಡೆದ ಬಳಿಕ ರಾಮಾಚಾರ್ಯ ಅವರು 'ನವಶಕ್ತಿ'(1939) ಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಆ ಬಳಿಕ 1940ರಲ್ಲಿ 'ನವಶಕ್ತಿ' ಪತ್ರಿಕೆ 'ಧುರೀಣ' ಎಂದು ಮರುನಾಮಕರಣಗೊಂಡಿತ್ತು.

'ಧುರೀಣ' ಪತ್ರಿಕೆಗೆ ಪಂಡಿತ್ ತಾರಾನಾಥ್, ಕಡೆಂಗೋಡ್ಲು ಶಂಕರಭಟ್ಟ, ಅನಕೃ ಮತ್ತು ಕೆ ಶಿವರಾಮ ಕಾರಂತರಂತಹ ಖ್ಯಾತನಾಮರು ಬರೆಯುತ್ತಿದ್ದದ್ದು ವಿಶೇಷವಾಗಿತ್ತು. ರಾಮಚಾರ್ಯರು ಉಡುಪಿಯಲ್ಲಿ 'ಯುಗ ಪುರುಷ'(1946) ಮತ್ತು 'ಸುದರ್ಶನ'(1950) ಸಂಸ್ಥಾಪಕರೂ ಹೌದು. ಬಳಿಕ ಅವರು ಮಂಗಳೂರಿನ 'ನವಭಾರತ' ಪತ್ರಿಕೆಗೆ ಸೇರಿದ್ದರು.

ನಾಡಿನ ಹಲವಾರು ನಿಯತಕಾಲಿಕೆಗಳಿಗೆ ಹಾಗೂ ದಿನಪತ್ರಿಕೆಗಳಿಗೆ ಬರೆಯುತ್ತಿದ್ದ ರಾಮಾಚಾರ್ಯ ಅವರು 1970 ರಿಂದ 1984ರವರೆಗೂ 'ಉದಯವಾಣಿ' ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಹಲವಾರು ಕತೆಗಳು, ಭಗವತ್ ಗೀತೆ ಸೇರಿದಂತೆ ಹಲವು ಕಾದಂಬರಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X