ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲವಂತ ಭೂಸ್ವಾಧೀನ ಸಂಸ್ಕೃತಿ ನಾಶಕ್ಕೆ ದಾರಿ

By Mahesh
|
Google Oneindia Kannada News

Vishveshwara Theertha Swamiji
ಉಡುಪಿ, ಫೆ. 6: ಬಲವಂತದ ಭೂ ಸ್ವಾಧೀನ ನಿರ್ಧಾರ ಗ್ರಾಮೀಣ ಸಂಸ್ಕೃತಿ ನಾಶಕ್ಕೆ ದಾರಿಯಾಗಿದೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.ಭಕ್ತರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ವಿಶೇಷ ಕೈಗಾರಿಕೆ ವಲಯ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಗೊತ್ತು ಗುರಿಯಿಲ್ಲದೆ ಕೈಗಾರಿಕೆ ಸ್ಥಾಪನೆ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದು ಸರಿಯಲ್ಲ. ಯೋಜನೆ ಅನುಷ್ಠಾನಕ್ಕೆ ರೈತರೇ ಸ್ವಯಂ ಪ್ರೇರಣೆಯಿಂದ ನೀಡಿದರೆ ತಕರಾರಿಲ್ಲ. ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಮಾರಕವೆನಿಸುವ ಯೋಜನೆಗಳನ್ನು ಬೆಂಬಲಿಸುವುದಿಲ್ಲ. ಹೊಸ ಕೈಗಾರಿಕೆಗಳ ಸ್ಥಾಪನೆ ಬದಲು ರೋಗಗ್ರಸ್ತ ಘಟಕಗಳ ಪುನಶ್ಚೇತನಕ್ಕೆ ಸರಕಾರ ಗಮನಹರಿಸಲಿ ಎಂದರು.

ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಸೋಮಶೇಖರ ವಿಚಾರಣೆ ಆಯೋಗದ ಮಧ್ಯಂತರ ವರದಿ ಅಧಿಕೃತವಾಗಿ ಬಹಿರಂಗವಾಗಿಲ್ಲ. ಹಿಂದೂ ಪರ ಸಂಘಟನೆಗಳ ಪಾತ್ರ ಉಲ್ಲೇಖದ ಜತೆಗೆ ಮತಾಂತರ ಪ್ರಕ್ರಿಯೆಗಳು ಸಂಘರ್ಷಗಳಿಗೆ ಕಾರಣ ಎಂಬುದು ದಾಖಲಾಗಿದೆ. ಆದರೆ ಹಿಂದೂ ಪರ ಸಂಘಟನೆಗಳ ವಿರೋಧದ ಹೇಳಿಕೆಗಳು ಹೆಚ್ಚು ಪ್ರಚಾರ ಪಡೆಯುತ್ತಿದ್ದು, ವಾಸ್ತವಿಕ ವರದಿ ಮರೆಯಾಗುತ್ತಿದೆ ಎಂದು ಹೇಳಿದರು.

ಜನರು ಕಾನೂನು ಕೈಗೆ ತೆಗೆದುಕೊಳ್ಳು ವುದು ಒಳ್ಳೆಯದಲ್ಲ. ಮತಾಂತರ ಪ್ರವೃತ್ತಿ ಭಯೋ ತ್ಪಾದನೆಗೆ ಕಾರಣವಾಗುತ್ತದೆ ಎಂಬುದು ಮನವರಿಕೆಯಾಗಬೇಕಿದೆ. ಸಂಘಟನೆಯ ಕೆಲವು ಯುವಕರಿಂದಾಗಿ ಘರ್ಷಣೆ ನಡೆದಿದ್ದರೂ ವಿರೋಧಿಸುವಷ್ಟು ತಪ್ಪೇನೂ ನಡೆದಿಲ್ಲ. ಮಧ್ಯಂತರ ವರದಿಗೆ ಸರಕಾರ ಪ್ರತಿಕ್ರಿಯಿಸಬೇಕೆ ವಿನಃ ಸಂಘಟನೆಗಳಲ್ಲ. ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ಸಮಗ್ರ ವರದಿ ಕರಡು ಸಿದ್ಧವಾಗಿದ್ದು, ಶೀಘ್ರ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X