ಹುಲಿ ಬಂತು ಹುಲಿ ಲೆಕ್ಕ ಹಾಕಿ ಬೇಗ!
ಜನವರಿಯಿಂದ ಹುಲಿಜಾಡು ಹುಡುಕಿಕೊಂಡು ಹೊರಟ ಎರಡು ತಂಡಗಳು ಸುಮಾರು 643 ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಕ್ರಮಿಸಿದರು. ಸುಮಾರು 170 ಕ್ಕೂ ಹೆಚ್ಚು ಪರಿಸರ ಪ್ರೇಮಿ ಸದಸ್ಯರುಗಳು ಸ್ವಯಂಪ್ರೇರಿತರಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷ. ಕೆಲವರು ಮೊದಲ ಬಾರಿಗೆ ನೈಜವಾದ ಹುಲಿ ನೋಡಿ ಖುಷಿಪಟ್ಟರೆ ಮತ್ತೆ ಕೆಲವರು ಹುಲಿ ಹೆಜ್ಜೆ ನೋಡಿ ತೃಪ್ತಿ ಹೊಂದಿದರು. ಹುಣಸೂರು ಅರಣ್ಯ ವಿಭಾಗದ ಅಧಿಕಾರಿ ವಿಜಯ್ ರಂಜನ್ ಸಿಂಗ್ ಅವರ ನೇತೃತ್ವದಲ್ಲಿ ನಾಗರಹೊಳೆಯಲ್ಲಿ ಗಣತಿ ಕಾರ್ಯ ನಡೆಸಲಾಯಿತು.
ಮನುಷ್ಯರ
ವಾಸನೆ
ಅರಿತ
ಹುಲಿಗಳು
ತಮ್ಮ
ಪಥ
ಬದಲಿಸಿ,
ತಂಡಕ್ಕೆ
ಸಾಕಷ್ಟು
ಬೆವರಿಳಿಸಿದ್ದಂತೂ
ಸತ್ಯ.
ಹುಲಿ
ಗಣತಿ
ಜೊತೆಗೆ
ಅಕರ್ಷಕ
ಗಿಡ
ಮರ,
ಪಕ್ಷಿ
ಪ್ರಾಣಿಗಳ
ಬಗ್ಗೆ
ಕೂಡ
ಮಾಹಿತಿ
ಸಂಗ್ರಹ
ಮಾಡಲಾಯಿತು.
ಲಭ್ಯ
ಮಾಹಿತಿಯನ್ನು
ದಾಂಡೇಲಿಯ
ಅರಣ್ಯ
ಇಲಾಖೆಗೆ
ನೀಡಲಾಗುತ್ತದೆ.
ರಾಜ್ಯದಲ್ಲಿರುವ
ಹುಲಿ
ಸಂತತಿಯ
ನಿಖರ
ಅಂಕಿ
ಅಂಶ
ತಿಳಿಯಲು
ಇನ್ನು
ತಿಂಗಳಾದರೂ
ಕಾಯಬೇಕು.
ಸಂತಸದ
ಸಂಗತಿಯೆಂದರೆ
ಕಳೆದ
ಬಾರಿಯ
ಗಣತಿಗೆ
ಹೋಲಿಸಿದರೆ
ನಾಗರಹೊಳೆಯಲ್ಲಿ
ಹುಲಿಗಳ
ಸಂಖ್ಯೆ
ಹೆಚ್ಚಾಗಿರುವುದು
ಕಂಡು
ಬಂದಿದೆ.
ಕಳೆದ
ವರ್ಷದ
ಗಣತಿಯಲ್ಲಿ
65ಹುಲಿಗಳು
ಮಾತ್ರ
ಕಾಣಿಸಿದ್ದವು.
ಅಂದಾಜು
ಎಷ್ಟು
ಹುಲಿಗಳಿವೆ?:
ಮೂರು
ವರ್ಷದ
ಕೆಳಗೆ
ನಡೆಸಲಾದ
ಗಣತಿಯ
ಪ್ರಕಾರ
ಭಾರತದಲ್ಲಿ
ಸುಮಾರು
1,500
ರಿಂದ
1,657
ಹುಲಿಗಳು
ಕಂಡುಬಂದಿದ್ದವು.ವಿಶ್ವದೆಲ್ಲೆಡೆ
ಸುತ್ತಾಟ
ನಡೆಸಿ
ಶೋಧಿಸಿದರೂ,
ಬೆಂಗಾಲದ
'ರಾಯಲ್'
ಹುಲಿ,
ಪಟ್ಟೆ
ಹುಲಿ,
ಬಿಳಿ
ಹುಲಿ
ಎಲ್ಲವನ್ನು
ಒಟ್ಟುಗೂಡಿಸಿದರೂ
ನಿಮ್ಮ
ಕಣ್ಣಿಗೆ
ಕಾಣಸಿಗುವುದು
ಕೇವಲ
3,500
ಹುಲಿಗಳು
ಮಾತ್ರಎಂದು
ವನ್ಯಜೀವಿ
ತಜ್ಞರು
ಅಭಿಪ್ರಾಯಪಡುತ್ತಾರೆ.