ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯರಿಗೆ ತೈಲೋತ್ಪನ್ನ ಬೆಲೆ ಏರಿಕೆಯ ಶಾಕ್

By Prasad
|
Google Oneindia Kannada News

Petroleum products price hike imminent
ನವದೆಹಲಿ, ಫೆ. 4 : ಸಕ್ಕರೆ, ಬೇಳೆಯ ಬೆಲೆಏರಿಕೆಯ ಕುದಿಯಲ್ಲಿ ಬೆಂದು ರಾಡಿಯಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಬೆಲೆಏರಿಕೆಯ 'ಶಾಕ್' ಬರಸಿಡಿಲಿನಂತೆ ಬಂದೆರಗಲಿದೆ. ಕಿರಿತ್ ಪಾರೀಖ್ ನೇತೃತ್ವದ ಸಮಿತಿಯ ಶಿಫಾರಸನ್ನು ಕೇಂದ್ರ ಸರಕಾರ ಒಪ್ಪಿದರೆ ಪೆಟ್ರೋಲಿಯಂ ಉತ್ಪನ್ನಗಳ ದರ ಆಕಾಶ ಮುಟ್ಟಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಮತ್ತು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ದರವನ್ನು ಏರಿಸಲು ಪಾರೀಖ್ ಸಮಿತಿ ಶಿಪಾರಸು ಮಾಡಿದೆ. ಇದರ ಪ್ರಕಾರ, ಪೆಟ್ರೋಲ್ 3 ರು., ಡೀಸೆಲ್ 1 ರು., ಸೀಮೆಎಣ್ಣೆ 6 ರು. ಮತ್ತು ಅಡುಗೆ ಅನಿಲ ಕನಿಷ್ಠ 100 ರು. ಏರಲಿದೆ.

ಆದರೆ, ಹಣದುಬ್ಬರವನ್ನು ನಿಯಂತ್ರಣದಲ್ಲಿರಲು ಮತ್ತು ಏರಿದ ಬೆಲೆಗಳನ್ನು ಇಳಿಸಲು ಕೇಂದ್ರ ಸರಕಾರ ಹರಸಾಹಸಪಡುತ್ತಿರುವ ಸಂದರ್ಭದಲ್ಲಿ ಪಾರೀಖ್ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಒಪ್ಪಿಕೊಳ್ಳುವ ಸಾಧ್ಯತೆಗಳು ತುಂಬ ಕಡಿಮೆ ಕಾಣುತ್ತಿವೆ. ಇನ್ನೊಂದು ವಾರದ ಒಳಗಡೆ ಕೇಂದ್ರ ಸಂಪುಟ ಸಭೆಯಲ್ಲಿ ಪಾರೀಖ್ ಸಮಿತಿಯ ವರದಿಯನ್ನು ಮಂಡಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.

ತೈಲೋತ್ಪನ್ನಗಳ ಬೆಲೆ ಏರಿಸುವಲ್ಲಿ ಕೇಂದ್ರ ಅನುಸರಿಸುತ್ತಿರುವ ನೀತಿ ಸಮಂಜಸವಾಗಿಲ್ಲ ಎಂದು ಸಮಿತಿ ಹೇಳಿದೆ. ಅಲ್ಲದೆ, ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ಮಾಲಿಕತ್ವದ ಸಂಸ್ಥೆಗಳಿಗೆ ಬೆಲೆ ನಿಯಂತ್ರಿಸಲು ಸಮಾನ ಅವಕಾಶ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X