ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 4 ಬಸ್ ದಿನ,ಮಿಸ್ ಮಾಡ್ಬೇಡಿ

By Mahesh
|
Google Oneindia Kannada News

BMTC Bus Day on Feb 4
ಬೆಂಗಳೂರು, ಫೆ. 3: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ನಗರ ಸಂಚಾರ ಪೊಲೀಸ್, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆಲ ಎನ್ ಜಿಒಗಳು ಜಂಟಿಯಾಗಿ ನಾಳೆ(ಫೆ.4) ರಂದು ಬಸ್ ದಿನ ಆಚರಿಸಲು ಉತ್ಸುಕರಾಗಿದ್ದಾರೆ. ಈ ವರ್ಷ ಪ್ರತಿ ತಿಂಗಳ ನಾಲ್ಕನೆ ತಾರೀಖು ಬಸ್ ದಿನವನ್ನು ಆಚರಿಸಲಾಗುತ್ತದೆ.ತಮ್ಮಮ್ಮ ಖಾಸಗಿ ವಾಹನಗಳನ್ನು ಬದಿಗಿಟ್ಟು ನಾಳೆ ದಿನ ಬಸ್ ಏರಿ ಆಫೀಸಿಗೆ ಹೋಗುತ್ತೇವೆ ಎಂದು ಈಗಾಗಲೇ ಅಸಂಖ್ಯಾತ ಟೆಕ್ಕಿಗಳು ಇಮೇಲ್, ಯಾಹೂ ಗ್ರೂಪ್ಸ್, ಟ್ವಿಟ್ಟರ್, ಆರ್ಕುಟ್, ಫೇಸ್ ಬುಕ್, ದಟ್ಸ್ ಕನ್ನಡ ಇತ್ಯಾದಿ ಇತ್ಯಾದಿ ವೆಬ್ ಸ್ಥಳಗಳಲ್ಲಿ ಪರಿಸರಸ್ನೇಹಿ ಸಂಕಲ್ಪ ಮಾಡಿದ್ದಾರೆ.

ನಾಳೆ ಎಲೆಕ್ಟ್ರಾನಿಕ್ ಸಿಟಿ ಹಾಗೂ ಐಟಿಪಿಎಲ್ ನ ಐಟಿ ಕಾರಿಡಾರ್ ಗಳ ಟೆಕ್ಕಿಗಳು ಬಸ್ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಬಿಎಂಟಿಸಿ ಅಧಿಕಾರಿಗಳು ಕೂಡ ಬಸ್ ನಲ್ಲಿ ಸಂಚರಿಸುತ್ತಿರುವುದು ವಿಶೇಷ.ಸಂಚಾರ ಒತ್ತಡ ಇರುವ ಸಮಯದಲ್ಲಿ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಕೆಆರ್ ಮಾರುಕಟ್ಟೆ, ಮಡಿವಾಳ, ಕೋರಮಂಗಲ, ಬಸವೇಶ್ವರ ನಗರ, ಬನಶಂಕರಿ, ವಿಜಯನಗರ, ವಿದ್ಯಾರಣ್ಯಪುರ, ಕೆಆರ್ ಪುರಂ ಮುಂತಾದ ಸ್ಥಳಗಳಲ್ಲಿ ಹೆಚ್ಚೆಚ್ಚು ಬಸ್ ಗಳು ಸಂಚರಿಸಲಿವೆ.

ಫೀಡರ್ ಸೇವೆ: ಕೋನಪ್ಪನ ಅಗ್ರಹಾರ>ಎಲೆಕ್ಟಾನಿಕ್ ಸಿಟಿ ಮುಖ್ಯದ್ವಾರ, ಮಾರತ್ತಹಳ್ಳಿ>ಹೋಪ್ ಫಾರಂ ಮಾರ್ಗ ಕುಂದಲ ಹಳ್ಳಿ, ಗ್ರಾಫೈಟ್ ಇಂಡಿಯಾ>ಸತ್ಯಸಾಯಿ ಆಸ್ಪತ್ರೆ>ಐಟಿಪಿಎಲ್. ಪ್ರತಿ ಐದು ನಿಮಿಷಕ್ಕೆ ಈ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದರು.

ಇಷ್ಟೆಲ್ಲಾ ಯಾಕೆ: ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಒತ್ತಡವನ್ನು ತಗ್ಗಿಸಲು ಮಾಡಿದ ಸರಳ ಉಪಾಯವಿದು.ವಾಯು ಮಾಲಿನ್ಯ, ಶಬ್ದಮಾಲಿನ್ಯ ತಡೆಗೆ ಸಹಕರಿಸಿ ಎಂದು ದೊಡ್ಡ ದೊಡ್ಡ ಪದ ಬಳಸಿ ಪರಿಸರ ಸಂರಕ್ಷಣೆಗೆ ಸಾರ್ವಜನಿಕರನ್ನು ವಿಶೇಷವಾಗಿ ಟೆಕ್ಕಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಸುಲಭವಾಗದ ಕಾರಣ, ಬಸ್ ದಿನ ಎಂದು ಹಬ್ಬ ಹರಿದಿನದಂತೆ ದಿನಗೊಂದು ಹೊಸ ಹೆಸರು ಕೊಟ್ಟು ಆಕರ್ಷಿಸುವುದು. ಇದರಿಂದ ಬಿಎಂಟಿಸಿಗೂ ಲಾಭ. ಪರಿಸರಕ್ಕೂ ಒಳ್ಳೆಯದು, ಕಂಗ್ರಾಟ್ಸ್ ಟು ಅಶೋಕ್, ನವರಸ ನಾಯಕ ಜಗ್ಗೇಶ್ ಅಂಡ್ ಟೀಮ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X