ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷ್ ಪತ್ರಿಕೆಗಳಿಂದ ರಾಜ್ಯಕ್ಕೆ ದ್ರೋಹ

By * ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರು
|
Google Oneindia Kannada News

TOI Ahmedabad
ಕಳೆದ ಕೆಲದಿನಗಳು ಹಜೀರಾ ಸೂರತ್ (ಗುಜರಾತ್)ನಲ್ಲಿ ಇದ್ದೆ. ಹೋಟಲ್ ರೂಮಿನಲ್ಲಿ "ಟೈಮ್ಸ್ ಆಫ್ ಇಂಡಿಯಾ" ಅಹಮದಾಬಾದ್ ಸೂರತ್ ಆವೃತ್ತಿಯ ಪತ್ರಿಕೆ ಸಿಗ್ತಿತ್ತು. ಟೈಮ್ಸ್ ಆಫ್ ಇಂಡಿಯಾದ ಈ ಆವೃತ್ತಿಯನ್ನು ಪ್ರತಿದಿನ ತಿರುವಿ ಹಾಕುವಾಗ ಗಮನಕ್ಕೆ ಬಂದದ್ದು ಗುಜರಾತಿಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಇವರು ಕೊಡುತ್ತಿದ್ದ ಪ್ರಾಮುಖ್ಯತೆ! ಇಲ್ಲಿ ಲಗತ್ತಿಸಿರುವ ಮುಖಪುಟದ ಕೆಲವು ಅಗ್ರ ಸುದ್ದಿಗಳನ್ನು (Lead News)ಗಮನಿಸಿ.

ಯಾವುದೇ ರಾಜ್ಯದ ಯಾವುದೇ ಮಾಧ್ಯಮಗಳು ಅಲ್ಲಿನ ಸ್ಥಳೀಯ ಸುದ್ದಿಗಳಿಗೆ, ಅಲ್ಲಿನ ಒಳಿತನ್ನು ಬಿಂಬಿಸುವುದಕ್ಕೆ, ಅವರಿಗಾದ ಅನ್ಯಾಯದ ಪ್ರತಿಭಟನೆಗೆ ವೇದಿಕೆ ಒದಗಿಸುವುದಕ್ಕೆ ಒಟ್ಟಾರೆ ಆ ರಾಜ್ಯದ ಆಗುಹೋಗುಗಳಿಗೆ ಸ್ಪಂದಿಸಿ ಬದ್ಧವಾಗಿರಬೇಕಾದದ್ದು ಸಹಜವಾದದ್ದೆ.

ಆದರೆ ಇದಕ್ಕೆ ವಿರುದ್ಧವಾಗಿರುವುದು ನಮ್ಮ ಕರ್ನಾಟಕದ ಇಂಗ್ಲೀಷ್ ಮಾಧ್ಯಮಗಳು. "ಅಪ್ಪಟ ಪ್ರತಿಭೆಗಳಾದ ವಿನಯ್ ಕುಮಾರ್ ಮತ್ತು ಮನೀಷ್ ಪಾಂಡೆ ಯಾಕೆ ಹೊರಗುಳಿದರು", "ವಿಜಯನಗರದ ಕೃಷ್ಣದೇವರಾಯರ 500 ನೇ ವರ್ಷಾಚರಣೆ" ಹೀಗೆ ಕರ್ನಾಟಕದ ಯಾವುದೇ ಪ್ರಮುಖ ವಿಷಯಗಳು "ಯಾವುದೇ ಟೈಮ್ಸ್ " ನಲ್ಲಿ ಮುಖಪುಟದ ಸುದ್ಧಿಯಾಗಲಿಲ್ಲ.

ಆದರೆ ಕೃಷ್ಣದೇವರಾಯ ಕುರಿತಾದ ಬಣ್ಣ ಬಣ್ಣದ "ಜಾಹೀರಾತು" ಮಾತ್ರ ಈ ಪತ್ರಿಕೆಗಳಲ್ಲಿ ಕಂಡು ಬಂದದ್ದು ಸತ್ಯ!ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಗಳಿಗೂ ಕನ್ನಡಕ್ಕೂ ಒಂದು ರೀತಿಯ ಎಣ್ಣೆ ಸಿಗೇಕಾಯಿ ಬಾಂಧವ್ಯವೆ! ಬೆಂಗಳೂರಿನಲ್ಲಿ ಕನ್ನಡ ಮಾತ್ರ ಏಕಿದೆ? ಬೆಂಗಳೂರಿನಲ್ಲಿ ಕನ್ನಡಿಗರಿರುವುದೇ ಶೇಕಡ 30 ಮಂದಿ, ವಲಸಿಗರು ಕನ್ನಡ ಕಲಿಯಬೇಕಾದ ಅವಶ್ಯಕತೆಯಿಲ್ಲ ಎಂಬ ಸುದ್ಧಿಗಳಿಗೆ ಪ್ರಚಾರ ನೀಡುವುದಕ್ಕೆ ಈ ಪತ್ರಿಕೆಗಳು ಮರೆಯುವುದಿಲ್ಲ.

ಇದು ಹೀಗ್ಯಾಕೆ ಎಂದು ನಮ್ಮ ಇಂಗ್ಲೀಷ್ ಮಾಧ್ಯಮದವರನ್ನು ವಿಚಾರಿಸಿ. "ಸಂಕುಚಿತರಾಗಬೇಡಿ" "ವಿಶ್ವ ಮಾನವರಾಗಿ" ಎಂದು ಬುದ್ಧಿವಾದ! ಸಿಗುವುದು ಗ್ಯಾರಂಟಿ. ಇವರ ಬುದ್ಧಿವಾದವನ್ನು ನಾವು ಒಪ್ಪಿಕೊಳ್ಳುವುದಾದರೆ ಗುಜರಾತ್ ನ ಇಂಗ್ಲೀಷ್ ಮಾಧ್ಯಮದವರು ಸಂಕುಚಿತರೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X