ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರಣಾಗತ ಉಗ್ರನಿಗೆ ಪದ್ಮಶ್ರೀ ಗೌರವ!

By Mahesh
|
Google Oneindia Kannada News

Ghulam Mohammed Mir,
ನವದೆಹಲಿ, ಫೆ 3 : ಇತ್ತೀಚಿಗೆ ಪ್ರಕಟಿಸಿರುವ 2010ರ ಪದ್ಮ ಪ್ರಶಸ್ತಿಗೆ ಶರಣಾಗಿರುವ ಕಾಶ್ಮೀರದ ಭಯೋತ್ಪಾದಕ ಗುಲಾಂ ಮೊಹಮ್ಮದ್ ಮೀರ್ ಯಾನೆ ಮಾಮ ಖಾನ್ ಎನ್ನುವಾತನನ್ನು ಪದ್ಮಶ್ರೀ ಪ್ರಶಸ್ತಿಗೆ ಕೇಂದ್ರದ ಯುಪಿಎ ಸರಕಾರ ಆಯ್ಕೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆತನ ಮೇಲಿರುವ ಕೊಲೆ ಸುಲಿಗೆ ಪ್ರಕರಣಗಳು ಇನ್ನು ಇತ್ಯರ್ಥವಾಗದಿದ್ದರೂ ಕೇಂದ್ರ ಸರಕಾರ ಆತನ 'ಸಾಮಾಜಿಕ ಸೇವೆ' ಗುರುತಿಸಿ ಈ ಪ್ರಶಸ್ತಿ ಪ್ರಕಟಿಸಿ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಈ ವಿಷಯವನ್ನು ಕುರಿತು ದಿ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆ ಕೂಲಂಕುಷವಾಗಿ ವರದಿ ಪ್ರಕಟಿಸಿದೆ.

ಈಗಾಗಲೇ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕಾ ಮೂಲದ ಸಂತಾ ಸಿಂಗ್ ಚತ್ವಾಲ್ ಮತ್ತು ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಕೇಂದ್ರ ಸರಕಾರ ವಿವಾದ ಹುಟ್ಟು ಹಾಕಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಚತ್ವಾಲ್ ಸುಮಾರು 41ಕೋಟಿ ರುಪಾಯಿ ವಂಚಿಸಿ ಸಿಬಿಐನಿಂದ ಬಂಧನಕ್ಕೊಳಗಗಿದ್ದರು. ನಟ ಸೈಫ್ ಆಲಿ ಖಾನ್ ಜಿಂಕೆ ಮರಿಯನ್ನು ಕೊಂದು ಕ್ರಿಮಿನಲ್ ಆರೋಪಕ್ಕೆ ಒಳಗಾಗಿದ್ದರು.

ಈ ಮಧ್ಯೆ, ಮೊಹಮ್ಮದ್ ಮೀರ್ ಗೆ ನೀಡಿದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಭದ್ರತಾ ಪಡೆಗೆ ಶರಣಾದ ನಂತರ ಮೀರ್ ಭಯೋತ್ಪಾದನಾ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ. ಅಲ್ಲದೆ ಹಲವು ಉಗ್ರರನ್ನು ಸೆರೆ ಹಿಡಿಯುವುದು ಅಥವಾ ಕೊಂದು ಹಾಕಿದ್ದ. ಆತ ಈ ಪ್ರಶಸ್ತಿಗೆ ಅರ್ಹ ಎಂದು ಕೇಂದ್ರ ಸರಕಾರ ತನ್ನಬೆನ್ನು ತಾನೇ ತಟ್ಟಿಕೊಂಡಿದೆ. ಕೇಂದ್ರದ ನಿರ್ಧಾರಕ್ಕೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಆತ ದೇಶಕ್ಕೆ ಗೌರವ ತರುವಂತ ಯಾವುದೇ ಕೆಲಸ ಮಾಡಿಲ್ಲ. ಆತ ಗೌರವಾನ್ವಿತ ವ್ಯಕ್ತಿಯಲ್ಲ, ಇದು ಪ್ರಶಸ್ತಿಗೆ ಘನತೆ ತರುವ ಬದಲು ಕೆಳಮಟ್ಟಕ್ಕಿಳಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X