ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಕೆ ಮಿಸ್ ಅಮೆರಿಕಾ, ಮಿಸ್ ಯುಎಸ್ಎ ಅಲ್ಲ

By Mahesh
|
Google Oneindia Kannada News

Miss America 2010 Caressa Cameron
ನೆವಡಾ, ಫೆ. 2:22 ವರ್ಷದ ಮಾಧ್ಯಮ ಪ್ರತಿಕೋದ್ಯಮ ವಿದ್ಯಾರ್ಥಿನಿ ಕೆರೆಸ್ಸಾ ಕ್ಯಾಮೆರೋನ್ ಈಬಾರಿಯ ಮಿಸ್ ಅಮೆರಿಕಾ ಕಿರೀಟವನ್ನು ಧರಿಸಿದ್ದಾರೆ. ಸುಮಾರು 52 ಸ್ಪರ್ಧಿಗಳನ್ನು ಹಿಂದಕ್ಕೆ ತಳ್ಳಿದ ಈಕೆಯ ಮುಡಿಗೆ ರತ್ನದ ಕಿರೀಟ ತೊಡಿಸಲಾಯಿತು. ಇದರೊಂದಿಗೆ 50 ಸಾವಿರ ಡಾಲರ್ ನಗದು ಕೂಡ ಕೈಸೇರಿತು. ಆದರೆ, ಇಲ್ಲೊಂದು ಸ್ವಾರಸ್ಯವುಂಟು, ಅಮೆರಿಕಾಕ್ಕೆ ಸುಂದರಿ ಎನಿಸಿದರೂ, ಭುವನ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಆ ಅವಕಾಶ ಮಿಸ್ ಯುಎಸ್ ಎ ಗೆ ಮಾತ್ರ.

ಮುಂಬರುವ ಸೆಪ್ಟೆಂಬರ್ ನಲ್ಲಿ ಮಿಸ್ ಯೂನಿವರ್ಸ್ 2010 ಸ್ಪರ್ಧೆನಡೆಯಲಿದೆ. ಆದರೆ ಇದರಲ್ಲಿ ಮಿಸ್ ಅಮೆರಿಕಾ ಸ್ಪರ್ಧಿಸುವಂತಿಲ್ಲ. ಮೇ ತಿಂಗಳಲ್ಲಿ ನಡೆಯುವ ಮಿಸ್ ಯುಎಸ್ ಎ ಸ್ಪರ್ಧೆಯಲ್ಲಿ ಗೆಲ್ಲುವ ಸುಂದರಿ ಮಾತ್ರ ಮಿಸ್ ಯೂನಿವರ್ಸ್ ಆಗಲು ಕನಸು ಕಾಣಬಹುದಾಗಿದೆ. ಮಿಸ್ ಅಮೆರಿಕಾ ಕೈಗೆ ಬಂದ ಸಾವಿರಾರು ಡಾಲರ್ ಹಣ, ಕಿರೀಟ ಧರಿಸಿ ಮೆರೆಯಬಹುದು ಅಷ್ಟೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X