ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಬದನೆ ವಿರುದ್ಧ ಬಾಬಾ ರಾಮದೇವ್ ಕಿಡಿ

By Mahesh
|
Google Oneindia Kannada News

Baba Ramdev
ಲಕ್ನೋ, ಫೆ.2: ಬಿ.ಟಿ.ಬದನೆಗೆ ರಾಮ್‌ದೇವ್ ವಿರೋಧ ಬಿಟಿ ಬದನೆಯನ್ನು ವಾಣಿಜ್ಯ ನೆಲೆಯಲ್ಲಿ ಉತ್ಪಾದಿಸಲು ಮುಂದಾಗಿರುವ ಸರಕಾರದ ನಿಲುವನ್ನು ಯೋಗ ಗುರು ಬಾಬಾ ರಾಮ್‌ದೇವ್ ತೀವ್ರವಾಗಿ ವಿರೋಧಿಸಿದ್ದಾರೆ. ಈ ದೇಶವನ್ನು ಸರಕಾರವೊಂದು ಈ ರೀತಿಯಾಗಿ ಅಪಹಾಸ್ಯಕ್ಕೀಡು ಮಾಡುವುದೇ ಎಂದು ಆಕ್ರೋಶದಿಂದ ಪ್ರಶ್ನಿಸಿರುವ ಅವರು, ಈ ರೀತಿ ಕುಲಾಂತರಿ ತಳಿಯ ಆಹಾರದಿಂದ ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ದೈಹಿಕ ಅನಾರೋಗ್ಯ ಉಂಟಾಗಲಿದ್ದು, ಇದರಿಂದ ಲಕ್ಷಾಂತರ ಭಾರತೀಯರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದಿದ್ದಾರೆ.

ಇದ್ಯಾವುದೂ ಸರಕಾರವನ್ನು ಕಾಡುತ್ತಿಲ್ಲವೇ ? ಸರಕಾರದ ಇಂತಹ ಜನವಿರೋಧಿ ನಿಲುವು ನಾಚಿಕೆಗೇಡು ಎಂದು ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಕುಲಾಂತರಿ ಆಹಾರದಿಂದ ಗಂಭೀರ ಆರೋಗ್ಯ ಸಮಸ್ಯೆ ಬಾಧಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ. ದಿಲ್ಲಿಯಲ್ಲಿ ಪ್ರತಿಭಟನೆ ದಿಲ್ಲಿಯಲ್ಲಿ ಗ್ರೀನ್‌ಪೀಸ್ ಇಂಡಿಯಾ ವತಿಯಿಂದ ದಿಲ್ಲಿಯಲ್ಲಿ ಬಿ.ಟಿ.ಬದನೆ ಬೆಳೆಯಲು ಅವಕಾಶ ನೀಡುವ ಸರಕಾರದ ನೀತಿಯ ವಿರುದ್ಧ ಮೌನ ಮೆರವಣಿಗೆ ನಡೆಯಿತು.

ಬಿಟಿ ಬದನೆ ವಿರುದ್ಧ ಗ್ರೀನ್ ಪೀಸ್ ಸಮರ
ಸಾವಿರಾರು ಮಂದಿ ಪಾಲ್ಗೊಂಡಿದ್ದರು.ಈಗಾಗಲೇ ಸರಕಾರದೇಶದ ಏಳು ಪ್ರಮುಖ ನಗರಗಳಲ್ಲಿ ಬಿ.ಟಿ.ಬದನೆ ಕುರಿತು ಸಾರ್ವಜನಿಕ ಚರ್ಚೆ ಆಯೋಜಿಸಿದ್ದು ಅಲ್ಲೆಲ್ಲ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆದ್ದರಿಂದ ಸರಕಾರ ಇದನ್ನು ನಿಷೇಧಿಸಬೇಕು ಎಂಬುದಾಗಿ ಗ್ರೀನ್‌ಪೀಸ್ ಇಂಡಿಯಾದ ದೀಪಕ್ ಪುರಿ ಹೇಳಿದರು. ಕಳೆದ ವರ್ಷ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಮ್ ರಮೇಶ್ ಅವರು ರೈತರು, ತಜ್ಞರು, ವಿಜ್ಞಾನಿಗಳೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವುದಾಗಿ ಭರವಸೆಯಿತ್ತಿದ್ದರು. ಆದರೆ ಇದೀಗ ಸರಕಾರ ಬಿ.ಟಿ.ಬದನೆ ಬೆಳೆಯುವ ಕುರಿತಂತೆ ಒಲವು ತೋರುತ್ತಿದೆ.

ಪರಿಸರ ಖಾತೆಯು ಜೆನೆಟಿಕ್ ಇಂಜಿನಿಯರಿಂಗ್ ಅಪ್ರೂವಲ್ ಕಮಿಟಿ (ಜಿಇಎಸಿ)ಯನ್ನು ರಚಿಸಿದ್ದು, ಇದು ಬಿಟಿ ಬದನೆಯನ್ನು ಹೊಲದಲ್ಲಿ ಬೆಳೆದು ಪರೀಕ್ಷಿಸುವಂತೆ ಶಿಫಾರಸು ಮಾಡಿತ್ತು. ಅಮೆರಿಕ ಮೂಲದ ಬಹುರಾಷ್ಟ್ರೀಯ ಕೃಷಿ ಜೈವಿಕ ತಂತ್ರಜ್ಞಾನ ಕಾರ್ಪೋರೇಶನ್ ಇದನ್ನು ಹೇಗಾದರೂ ಮಾಡಿ ಭಾರತದಲ್ಲಿ ತರುವಂತೆ ಹುನ್ನಾರ ನಡೆಸುತ್ತಿದ್ದು ವಿವಿಧ ಹಂತಗಳಲ್ಲಿ ಲಾಬಿ ನಡೆಸಿ ದೇಶದ ರಾಜಕಾರಣಿಗಳನ್ನು , ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು ಕಾರಸ್ಥಾನ ರೂಪಿಸುತ್ತಿದೆ ಎಂದು ಆರೋಪಿಸಲಾಗಿದೆ. ಇತ್ತ ಹೈದ್ರಾಬಾದ್‌ನಲ್ಲೂ ಬಿಟಿಬದನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X