ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ: ಮಧ್ಯಂತರ ವರದಿ ಸಲ್ಲಿಕೆ

By Mahesh
|
Google Oneindia Kannada News

Justice BK Somashekar
ಮಂಗಳೂರು, ಫೆ. 1: ರಾಜ್ಯದ ಸುಮಾರು 16 ಜಿಲ್ಲೆಗಳಲ್ಲಿ ನಡೆದ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿಕೆ ಸೋಮಶೇಖರ್ ಅವರ ನೇತೃತ್ವದ ಆಯೋಗ ಇಂದು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತಾ ಅವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಲಾಯಿತು.

ನ್ಯಾಯಮೂರ್ತಿ ಸೋಮಶೇಖರ್ ಅವರ ಆಯೋಗ ರಾಜ್ಯಾದ್ಯಂತ ಸಂಚರಿಸಿ, ಸುಮಾರು 731 ಜನರ ಸಾಕ್ಷಿಯನ್ನು ಪರಿಗಣಿಸಿ ವರದಿ ತಯಾರಿಸಿದೆ. ಸುಮಾರು 14 ಜಿಲ್ಲೆಗಳ ವಿಚಾರಣೆ ಮುಗಿದಿದ್ದು, ಇನ್ನುಳಿದ ಎರಡು ಮೂರು ಜಿಲ್ಲೆಗಳ ತನಿಖೆ ನಡೆಯುತ್ತಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ.

ವರದಿ ಸಲ್ಲಿಕೆಯ ಬಗ್ಗೆ ಅರಿವಿದ್ದು ಮಂಗಳೂರಿನಲ್ಲಿ ಚರ್ಚ್ ದಾಳಿ ನಡೆಸಿರುವ ಸಾಧ್ಯತೆಯಿದೆ. ಇದು ಕಿಡಿಗೇಡಿಗಳ ಪೂರ್ವ ನಿಯೋಜಿತ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದು ಎಸ್ಪಿ ರಾವ್ ಹೇಳಿದ್ದಾರೆ. ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 17ರ ಬಳಿ ಇರುವ ಮಂಗಳೂರು ಬಿಷಪ್ ಧರ್ಮಪ್ರಾಂತ್ಯಕ್ಕೆ ಒಳಪಟ್ಟ (ಕೆನರಾ ಆರ್ಗನೈಜೇಶನ್ ಫಾರ್ ಡೆವಲಪ್ ಮೆಂಟ್ ಅಂಡ್ ಪೀಸ್-ಸಿಓಡಿಪಿ) ಕ್ರೈಸ್ತ ಸಾಮಾಜಿಕ ಚಟುವಟಿಕೆ ಕೇಂದ್ರದ ಮೇಲೆ ಭಾನುವಾರ ಬೆಳಗ್ಗೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮೇರಿ ಮಾತೆಯ ಭಾವ ಚಿತ್ರಕ್ಕೆ ಅಳವಡಿಸಿದ್ದ ಗಾಜು ಪುಡಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X