ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಗೆ ಮುಂಬೈ ಚಿಂತೆ ಯಾಕೆ?: ಶಿವಸೇನೆ

By Mahesh
|
Google Oneindia Kannada News

Uddhav Thackrey
ಮುಂಬೈ ಫೆ 1 : ನಮ್ಮ ರಾಜಧಾನಿ ಮುಂಬೈ ನಲ್ಲಿ ಉತ್ತರ ಭಾರತೀಯರ ಬಗ್ಗೆ ನಿಮಗೆ ಚಿಂತೆ ಬೇಡ. ದಕ್ಷಿಣ ಭಾರತದಲ್ಲಿ ಉತ್ತರ ಭಾರತೀಯರ ಯೋಗ ಕ್ಷೇಮ ನೋಡಿಕೊಳ್ಳಿ. ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರ, ಕೇರಳ ಗಳಲ್ಲಿ ಹಿಂದಿ ಭಾಷೆ ನಲುಗುತ್ತಿದೆ. ಮೊದಲು ಅಲ್ಲಿ ಉತ್ತರ ಭಾರತೀಯರು ಮತ್ತು ಹಿಂದಿಯನ್ನು ಉದ್ದಾರಗೊಳಿಸಿ ಎಂದು ಶಿವಸೇನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತಿರುಗೇಟು ನೀಡಿದೆ.

ಪಕ್ಷದ ಮುಖವಾಣಿ 'ಸಾಮ್ನಾ' ದಲ್ಲಿ ಆರ್ಎಸ್ಎಸ್ ವಿರುದ್ದ ಹರಿಹಾಯ್ದಿರುವ ಸೇನೆ, 1992ರ ಹಿಂಸಾಚಾರದಲ್ಲಿ ಹಿಂದೂಗಳನ್ನು ರಕ್ಷಿಸಿದ್ದು ಶಿವಸೇನೆ ಹೊರತು ಆರ್ಎಸ್ಎಸ್ ಅಲ್ಲ. ನಿಮ್ಮ ವ್ಯಾಪ್ತಿ ಮೀರಿ ಹೇಳಿಕೆ ನೀಡಬೇಡಿ. ಮುಂಬೈ ವಿಚಾರದಲ್ಲಿ ಆರ್ಎಸ್ಎಸ್ ಯಾವುದೇ ಹೇಳಿಕೆ ನೀಡಬಾರದು. ಮುಂಬೈ ಮಹಾರಾಷ್ಟ್ರ ಮತ್ತು ಮರಾಠಿಗರಿಗೆ ಸೇರಿದ್ದು. ದಕ್ಷಿಣಭಾರತಕ್ಕೆ ಹೋಗಿ ಹಿಂದಿ ಉದ್ದಾರ ಮಾಡುವ ಕೆಲಸ ಮಾಡಿ ಎಂದು ಉದ್ಭವ್ ಠಾಕ್ರೆ ತಮ್ಮ ಪಕ್ಷದ ಮುಖವಾಣಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿ, ಆರ್ಎಸ್ಎಸ್ ವಿರುದ್ದ ಹೇಳಿಕೆ ನೀಡಿರುವ ಶಿವಸೇನೆಯ ವರ್ತನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದೆ.

ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾವೆಲ್ಲಾ ಭಾರತೀಯರು. ರಾಜಕೀಯಕ್ಕಾಗಿ ದೇಶ ವಿಭಜನೆಯ ಕೆಲಸ ಬೇಡ. ಯಾವುದೇ ಭಾರತೀಯ ಭಾರತದ ಯಾವುದೇ ಭಾಗದಲ್ಲಿ ಸಂಪಾದಿಸಿ ಜೀವನ ನಡೆಸ ಬಹುದು. ಉತ್ತರ ಭಾರತೀಯರನ್ನು ಮುಂಬೈನಲ್ಲಿ ರಕ್ಷಿಸ ಬೇಕಾಗಿದೆ ಎಂದು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X