ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಬದನೆಯನ್ನು ಆಧ್ಯಾತ್ಮವೂ ಒಪ್ಪದು

By Shami
|
Google Oneindia Kannada News

Ravishankar Guruji
ಭುವನೇಶ್ವರ್, ಫೆ 1 : ಬಿಟಿ ಬದನೆಯ ವಿರುದ್ಧ ದಿನೇದಿನೇ ವ್ಯಾಪಕವಾಗುತ್ತಿರುವ ಚಲೇಜಾವ್ ಚಳವಳಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪಕ ಶ್ರೀ ರವಿಶಂಕರ್ ಧುಮುಕಿದ್ದಾರೆ. ಭಾರತೀಯ ಮಾರುಕಟ್ಟೆಗೆ ಬಿಟಿ ಬದನೆಯ ವಾಣಿಜ್ಯ ಪ್ರವೇಶ ಆಗುವ ಮುನ್ನ ಅದರ ಎಲ್ಲ ಸಾಧಕ ಭಾದಕಗಳ ಬಗ್ಗೆ ಸಮಗ್ರ ಪರಿಶೀಲನೆ ಆಗಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

ಬಿಟಿ ಬದನೆ ವಿರುದ್ಧ ಕರ್ನಾಟಕವೂ ಸೇರಿದಂತೆ ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ರೈತರು, ಕೃಷಿ ತಜ್ಞರು ಮತ್ತು ಸಾಮಾಜಿಕ ಕಳಕಳಿ ಪ್ರದರ್ಶಿಸುವ ಅನೇಕರು ಈ ಬದನೆ ಕಾಯಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶ್ರೀರವಿಶಂಕರ್ ಬಿಟಿ ಬದನೆ ಬಗ್ಗೆ ಸೊಲ್ಲೆತ್ತುವುದರೊಂದಿಗೆ ಬಿಟಿಗೆ ಆಧ್ಯಾತ್ಮ ವಲಯದಿಂದಲೂ ಪ್ರತಿರೋಧ ಬಂದಂತಾಗಿದೆ.

ಪರಿಸರ ಮತ್ತು ಭಾರತೀಯ ಜನತೆಯ ಆರೋಗ್ಯದ ಮೇಲೆ ಬಿಟಿ ಬದನೆ ಉಂಟುಮಾಡುವ ಅಪಾಯವನ್ನು ಸಮಗ್ರವಾಗಿ ಅಭ್ಯಸಿಸದೆ ವಾಣಿಜ್ಯ ವಲಯಕ್ಕೆ ಅದು ಕಾಲಿಡಬಾರದು ಎಂದು ಅವರು ಭಾನುವಾರ ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದರು.

ಒಣ ಭೂಮಿ ಕೃಷಿ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಹೈದರಾಬಾದಿನಲ್ಲಿ ಏರ್ಪಡಿಸಲಾಗಿದ್ದ ಒಂದು ಸಾರ್ವಜನಿಕ ಸಲಹಾ ಸಭೆಯಲ್ಲಿ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಬಿಟಿ ಬದನೆಯ ಬಗೆಗೆ ಅಂತಿನ ನಿರ್ಧಾರವನ್ನು ಕೇಂದ್ರ ಸರಕಾರ ಇದೇ ಫೆ 10 ರ ನಂತರ ಪ್ರಕಟಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X