ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊಳ್ಳು ಬಡಿದು ದೆಹಲಿ ದಿಲ್ ಗೆದ್ದ ಮಕ್ಕಳು

By Mahesh
|
Google Oneindia Kannada News

Dollu Kunitha team
ಬೆಂಗಳೂರು, ಫೆ. 1: ಗಣರಾಜ್ಯೋತ್ಸವದ ದಿನದಂದು ನವದೆಹಲಿಯ ರಾಜ್ ಪಥದಲ್ಲಿ ಡೊಳ್ಳು ಬಡಿದು ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಪಡೆದ ಬೆಂಗಳೂರಿನ ಶಾಲಾ ಮಕ್ಕಳು ವಿಜಯೋತ್ಸವದೊಂದಿಗೆ ನಗರಕ್ಕೆ ಹಿಂದುರಿಗಿದ್ದಾರೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಶಾಲಾ ಮಕ್ಕಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಮುನಿರಾಜಯ್ಯ ಸಂತಸದಿಂದ ಸ್ವಾಗತಿಸಿದರು.

ಬೆಂಗಳೂರಿನ ಆರ್.ವಿ. ಶಾಲೆ, ಜೀವನಭೀಮಾನಗರದ ಸೇಕ್ರೆಡ್ ಹಾರ್ಟ್ ಶಾಲೆ ಹಾಗೂ ಜೀವನಭೀಮಾನಗರದ ಸರಕಾರಿ ಶಾಲೆ-ಈ 3 ಶಾಲೆಗಳಿಂದ ಒಟ್ಟು 160 ಮಕ್ಕಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು.ಇವರಲ್ಲಿ 140 ಹೆಣ್ಣು ಮಕ್ಕಳು. ಎಲ್ಲರೂ 8 ಮತ್ತು 9 ನೇ ತರಗತಿ ಕಲಿಯುತ್ತಿರುವವರು. 3 ತಿಂಗಳು ಕಠಿಣ ಅಭ್ಯಾಸ ಫಲ ಕೊಟ್ಟಿತು ತುಂಬಾ ಸಂತೋಷವಾಗಿದೆ ಎನ್ನುತ್ತಾರೆ ನೃತ್ಯ ಸಂಯೋಜನೆ ಮಾಡಿದ ಬೆಂಗಳೂರಿನ ಸುಜಾತಾ ಮೂರ್ತಿ .

ದಕ್ಷಿಣ ಭಾರತದಿಂದ ಪಥ ಸಂಚಲನದಲ್ಲಿ ಭಾಗವಹಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆ ಹೊಂದಿದ್ದ ನಮ್ಮ ಶಾಲಾ ಮಕ್ಕಳ ತಂಡಕ್ಕೆ ಜ.31 ರಂದು ಬೆಳಿಗ್ಗೆ ಅತ್ಯುತ್ತಮ ಪ್ರದರ್ಶನ ನೀಡಿದ ತಂಡ ಎಂದು ಫಲಕ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X