ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯೇಕ ಸೈಬರ್ ಪೊಲೀಸ್ ಪಡೆ ಅಗತ್ಯ: ಮೊಯ್ಲಿ

By Mahesh
|
Google Oneindia Kannada News

India needs a separate cyber police force: Moily
ನವದೆಹಲಿ, ಫೆ.1: ಅಶ್ಲೀಲ ಸಾಹಿತ್ಯ-ಚಿತ್ರಗಳು ಮತ್ತು ದ್ವೇಷದ ಭಾಷಣಗಳನ್ನು ಪ್ರಸಾರ ಮಾಡುವ ವೆಬ್ ಸೈಟ್‌ಗಳ ನಿಷೇಧಕ್ಕೆ ತುರ್ತುಕ್ರಮ ಜರುಗಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಭಾನುವಾರ ಹೇಳಿದ್ದಾರೆ. ಸೈಬರ್ ಕಾನೂನು ಅನುಷ್ಠಾನಕ್ಕಾಗಿಯೂ ಅವರು ಆಗ್ರಹಿಸಿದ್ದಾರೆ.

ವೆಬ್‌ಸೈಟ್‌ಗಳ ಎಲ್ಲ ವರ್ಗಗಳನ್ನು ನಿಷೇಧಿಸಬೇಕೆಂದು ತಾನು ಹೇಳುವುದಿಲ್ಲ. ಆದರೆ ಅಶ್ಲೀಲ ಸಾಹಿತ್ಯ ಮತ್ತು ದ್ವೇಷದ ಭಾಷಣ ಪ್ರಸಾರದ ಮೇಲೆ
ಸರಕಾರ ಅಗತ್ಯ ನಿಷೇಧ ಹೇರಬೇಕು ಎಂದು ಅವರು ಹೇಳಿದರು. ಸಾಹಿತಿಗಳು ಮತ್ತು ಕಲಾವಿದರ ಬೌದಿಟಛಿಕ ಆಸ್ತಿ ಹಕ್ಕುಗಳು ಹೆಚ್ಚಿನ ಸಂದರ್ಭಗಳಲ್ಲಿ
ಅನಧಿಕೃತವಾಗಿ ವೆಬ್‌ಸೈಟ್‌ಗಳ ಮೂಲಕ ಉಲ್ಲಂಘನೆಗೊಳಗಾಗುತ್ತವೆ. ಅಲ್ಲದೆ ಹಣಕಾಸಿನ ವಂಚನೆ ಪ್ರಕರಣಗಳನ್ನು ಕೂಡಾ ಎಸಗಲಾಗುತ್ತದೆ.

ಸೈಬರ್ ಕಾನೂನು ಜಾರಿ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಸಲಹಾಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ಇಂದು ಹೆಚ್ಚೆಚ್ಚು ಸಂಖ್ಯೆಯಲ್ಲಿ ಜನರು ಬಲಿಪಶು ಗಳಾಗುತ್ತಿದ್ದಾರೆ.ಅಶ್ಲೀಲ ಭಾಷೆ ಬಳಸಿ ಇ-ಮೇಲ್‌ಗಳನ್ನು ಇಂಟರ್‌ನೆಟ್ ಬಳಕೆದಾರರು ಪಡೆಯುತ್ತಿರುವ ಬಗ್ಗೆ ಅಸಂಖ್ಯಾತ ದೂರುಗಳಿವೆ.ವೆಬ್‌ಸೈಟಿನಲ್ಲಿ ನೀಡಲಾಗುವ ವೈವಾಹಿಕ ಮಾಹಿತಿ, ಉದ್ಯೋಗಾಕಾಂಕ್ಷಿಯ ವೈಯಕ್ತಿಕ ಮಾಹಿತಿ ಅಥವಾ ಸಾಮಾಜಿಕ ನೆಟ್‌ವರ್ಕಿಂಗ್‌ನ್ನು ದುರುಪಯೋಗಪಡಿಸಲು ಸೈಬರ್ ಅಪರಾಧಿಗಳು ಹಾತೊರೆಯುತ್ತಿರುತ್ತಾರೆ ಎಂಬುದಾಗಿ ಅವರು ಹೇಳಿದರು.

ಸೈಬರ್ ಕಾನೂನು ಅಗತ್ಯ: ಈ ಸಂದರ್ಭ ಮಾತನಾಡಿದ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ, ಸೀಮಾತೀತವಾಗಿ ತಂತ್ರಜ್ಞಾನದ ಬಳಕೆ
ಹೆಚ್ಚುತ್ತಿರುವ ಕಾರಣ ಇಂದು ಸೈಬರ್ ಕಾನೂನು ಅಗತ್ಯ ಹೆಚ್ಚಿದೆ. ಸೈಬರ್ ಕಾನೂನು ಕಟ್ಟುನಿಟ್ಟಾಗಿ ಜಾರಿಯಾದಾಗ ಮಾತ್ರ ಮಾಹಿತಿ ತಂತ್ರಜ್ಞಾನ ಉದ್ಯಮದ ಬಳಕೆ ಅರ್ಥಪೂರ್ಣವಾಗಿರಲು ಸಾಧ್ಯ. ಸೈಬರ್ ಅಪರಾಧಗಳನ್ನು ತಡೆಯಲು ಪ್ರತ್ಯೇಕ ಪೊಲೀಸ್ ಪಡೆ ಬೇಕು. ಇಂತಹ ಅಪರಾಧಗಳನ್ನು ನಿಯಂತ್ರಿಸಲು ವಿಶೇಷ ತನಿಖಾ ಸಂಸ್ಥೆಯೊಂದನ್ನು ರಚಿಸುವ ಅಗತ್ಯವಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X