ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಹಗರಣದಲ್ಲಿ ನಮ್ಮವರಿಲ್ಲ:ಎಚ್ಡಿಕೆ

By Mahesh
|
Google Oneindia Kannada News

HD Kumaraswamy
ಮಂಡ್ಯ ಫೆ 1 : ರಾಜ್ಯದಲ್ಲಿ ಬಿಜೆಪಿ ಸರಕಾರ ಹಗಲು ದರೋಡೆ ನಡೆಸುತ್ತಿದೆ. ಐಎಎಸ್/ ಐಪಿಎಸ್ ಅಧಿಕಾರಿಗಳಿಗೆ ದನಿ ಇಲ್ಲದಂತಾಗಿದೆ. ರಾಜ್ಯದ ಜನ ಬಿಜೆಪಿ ಆಡಳಿತ ನೋಡಿ ಬೇಸತ್ತಿದ್ದಾರೆ. ಜನ ದಂಗೆ ಏಳುವ ದಿನ ದೂರವಿಲ್ಲ. ನೈಸ್ ಯೋಜನೆಯಲ್ಲಿ ನಮ್ಮ ಕುಟುಂಬದವರಭೂಮಿಯಿಲ್ಲ. ಸುಮ್ಮನೆ ಆರೋಪ ಮಾಡುವ ಅಶೋಕ್ ಹಾರ್ನಳ್ಳಿಗೆ ಸತ್ಯಕ್ಕಿಂತ ಸುಳ್ಳಿನ ಪ್ರತಿಪ್ರಾದನೆಯೇ ಇಷ್ಟ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಈಶ್ವರಪ್ಪ ಅವರು ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಜೋಡಿಯನ್ನು ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರಿಗೆ ಹೋಲಿಕೆ ಮಾಡಿದ್ದಾರೆ. ಗುಪ್ತ ಮತ್ತು ಚಾಣಕ್ಯರ ಆಡಳಿತವನ್ನು ನಾವು ನೋಡಿಲ್ಲ ಆದರೆ ಓದಿದ್ದೇವೆ. ಮೂರು ದಿನಗಳ ಕಾಲ ಬಳ್ಳಾರಿಯಲ್ಲಿ ಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸಿದರು. ಅಲ್ಲಿ ನೆರೆ ಸಂತ್ರಸ್ತರು ಊಟ, ವಸತಿ ಇಲ್ಲದೆ ಸಂಕಷ್ಟ ದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಅದ್ದೂರಿ ಉತ್ಸವ ಬೇಕಿತ್ತೇ ಎಂದು ಗುಡುಗಿದ್ದಾರೆ.

ಬೆಳಗಾವಿ ಚವಾಣ್ ಗೆ ತರಾಟೆ:ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಜನರ ಭಾವನೆ ಕೆರಳಿಸುವ ಮಾತುಗಳು ಸಲ್ಲ. ಗಡಿಭಾಗ ಇಬ್ಬರಿಗೂ ಸೇರಿದ್ದಾದರೆ ಎರಡು ಸರ್ಕಾರದವರೂ ಜನರ ಯೋಗಕ್ಷೇಮ ವಿಚಾರಿಸಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.ಬೆಳಗಾವಿಗೆ ಆಗಮಿಸಿದ್ದ ಅಶೋಕ್ ಚವ್ಹಾಣ್ ಅವರು ಗಡಿಭಾಗದ ಮರಾಠಿಗರನ್ನು ಕರ್ನಾಟಕ ಕೀಳಾಗಿ ಕಾಣುತ್ತಿದೆ ಎಂದಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X