ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ ಸಂಭವ

By Rajendra
|
Google Oneindia Kannada News

Nandini milk could be costlier
ಬೆಂಗಳೂರು, ಜ. 29 : ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ಎರಡರಿಂದ ಮೂರೂ ರೂಪಾಯಿವರೆಗೆ ಹೆಚ್ಚಿಸಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವಡಿ ಹೇಳಿದ್ದಾರೆ. ಕೆಎಂಎಫ್ ಅಧ್ಯಕ್ಷರು ಹಾಲಿನ ದರ ಪರಿಷ್ಕರಣೆಗೆ ಅನುಮತಿ ನೀಡುವಂತೆ ಮೌಖಿಕವಾಗಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಮ್ಮಿ. ನಿರ್ವಹಣೆ ಮತ್ತು ಸರಕು ಸಾಗಾಣೆ ದರ ಏರಿಕೆಯಾಗಿದೆ.ಆದುದರಿಂದ ದರ ಪರಿಷ್ಕರಣೆ ಅನಿವಾರ್ಯ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಕೆಎಂಎಫ್ ನಷ್ಟದಲ್ಲಿಲ್ಲ. ಇತ್ತೀಚೆಗೆ ಲಾಭದ ಪ್ರಮಾಣದಲ್ಲಿ ಕಮ್ಮಿಯಾಗಿದೆ ಎಂದು ಮಂಡಳಿ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಈ ಮಧ್ಯೆ 'ಕ್ಷೀರಬಂಧು' ಬಿರುದಾಂಕಿತ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತು ತಪ್ಪಿದ್ದಾರೆ. ಸರಕಾರದ ಕನಸಿನ ಯೋಜನೆಯಾದ ರಾಜ್ಯದ ಹಾಲು ಉತ್ಪಾದಕರಿಗೆ ಎರಡು ರುಪಾಯಿ ಪ್ರೋತ್ಸಾಹ ದನ ಯೋಜನೆಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ನಿದ್ದೆ ಏಕಾಏಕಿ ಬಂದ್ ಮಾಡುವ ಮೂಲಕ ಹೈನೋದ್ಯಮಿಗಳ ಕೋಪಕ್ಕೆತುತ್ತಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X