ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಗಳ ಹೆಸರಿಡಲು ಜಾತಿ ಬಳಕೆ ಸಲ್ಲ: ದೇಜಗೌ

By Mahesh
|
Google Oneindia Kannada News

Prof De Jaware gowda
ಮೈಸೂರು, ಜ. 29: ಕರ್ನಾಟಕದ ನಾಡು ನುಡಿಗಾಗಿ ಶ್ರಮಿಸಿದ ಅನೇಕ ಮಹನೀಯರನ್ನು ಸ್ಮರಣಿಸುವುದು ಜನಪ್ರತಿನಿಧಿಗಳ ಹಾಗೂ ನಮ್ಮೆಲ್ಲರ ಕರ್ತವ್ಯ. ವಿಶ್ವವಿದ್ಯಾಲಯಗಳಿಗೆ ಜಾತಿ ಆಧಾರಿತವಾಗಿ ನಾಮಕರಣ ಮಾಡುವುದು ಹೇಯ ಕೃತ್ಯ ಎಂದು ಕರ್ನಾಟಕರತ್ನ ದೇ. ಜವರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಯುತರು, ಕನ್ನಡ ಏಳಿಗೆಗೆ ದುಡಿದ ಬಿಎಂಶ್ರೀ, ಕುವೆಂಪು ಮುಂತಾದವರ ಹೆಸರುಗಳನ್ನು ಅವರ ಕಾಯಕವನ್ನು ಉದಾಹರಿಸಿದರು. ಕನ್ನಡ ಸಾಹಿತ್ಯ, ಭಾಷೆ ಸಂಸ್ಕೃತಿಯನ್ನು ಪ್ರಚುರಗೊಳಿಸುವ ಕಾರ್ಯವನ್ನು ಇಂದಿನ ಯುವ ಪೀಳಿಗೆ ಮಾಡಬೇಕು. ಕನ್ನಡದ ವಿಷಯ ಬಂದಾಗ ಜಾತಿ ಮತ ಪಂಥವನ್ನು ಮರೆಯಬೇಕು ಭಾಷೆಯನ್ನು ಬೆಳೆಸಬೇಕು ಎಂದರು.

ಮತಾಂತರಕ್ಕೆ ಮಠಗಳೇ ಕಾರಣ: ಅಸ್ಪೃಶ್ಯತೆತನ ಬೆಳೆಸಿಕೊಂಡ ಮಠಗಳ ಕಾರಣದಿಂದ ಅಲ್ಪಸಂಖ್ಯಾತರರು ಮತಾಂತರದ ಹಾದಿ ತುಳಿಯುತ್ತಿರುವುದು ಹೆಚ್ಚಾಗಿದೆ. ಆದರೆ ಬಲವಂತದ ಮತಾಂತರಕ್ಕೆ ಒಮ್ಮತವಿಲ್ಲ. ಅಂತರ್ ಜಾತೀಯ, ಅಂತರ್ ಧರ್ಮೀಯ ಮದುವೆಗಳು ಆಗಬೇಕು. ರಾಜಕಾರಣಿಗಳು ಮತಬ್ಯಾಂಕ್ ಸ್ಥಾಪನೆ ಮಾಡಿ ಜನರನ್ನು ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ವಿಶ್ವಮಾನವ ತತ್ವ ಪ್ರತಿಪಾದಕರಾದ ದೇಜಗೌ ಹೇಳಿದರು.

ಆಡಳಿತ ಭಾಷೆ:
ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಬೆಳೆಯದಿರಲು ಕಾರಣ. ವ್ಯವಸ್ಥೆಯ ಸಂಕೀರ್ಣತೆ. ಭಾಷೆಯನ್ನು ಸರಳೀಕರಣಗೊಳಿಸಿ, ಇ -ಅಡಳಿತಕ್ಕೂ ಪ್ರೋತ್ಸಾಹ ನೀಡಬೇಕು ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಡನೆ ಚರ್ಚಿಸುವುದಾಗಿ ದೇಜಗೌ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X