ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೇಕಲ್ ನಲ್ಲಿ 2 ಸಾವಿರ ಜನಕ್ಕೆ ಉದ್ಯೋಗ!

By Mahesh
|
Google Oneindia Kannada News

Oracle plans to recruit 2,000 employees: Report
ನ್ಯೂಯಾರ್ಕ್, ಜ. 28: ಅರೇಕಲ್ ಸಾಫ್ಟ್ ವೇರ್ ಕಂಪೆನಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಉದ್ಯೋಗ ಅವಕಾಶ ಕಲ್ಪಿಸುವ ಭರವಸೆ ನೀಡಿದೆ. ಕಂಪೆನಿಯ ಮಾರುಕಟ್ಟೆ ವಿಸ್ತರಣೆ, ಇಂಜಿನಿಯರಿಂಗ್ ವಿಭಾಗಕ್ಕೆ ಅಧಿಕ ನೇಮಕಾತಿ ಅಗತ್ಯವಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಸದ್ಯಕ್ಕೆ ಸುಮಾರು 7 ಕೋಟಿ ಡಾಲರ್ ಹಣ ಹೂಡಿ ಸನ್ ಮೈಕ್ರೋ ಸಿಸ್ಟಮ್ಸ್ ಖರೀದಿಸಲು ಅರೇಕಲ್ ಮುಂದಾಗಿದೆ. ಸಾಫ್ಟ್ ವೇರ್ ಅಲ್ಲದೆ ಹಾರ್ಡ್ ವೇರ್ ಕ್ಷೇತ್ರದ ಬಗ್ಗೆ ಕೂಡ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಗಿದೆ. ಸನ್ ಮ್ರೈಕೋಸಿಸ್ಟಮ್ ನ ಉದ್ಯೋಗಿಗಳನ್ನು ತೆಗೆದು ಹೊಸಬ ನೇಮಕಾತಿ ಬಗ್ಗೆ ಕೂಡ ಚಿಂತನೆ ನಡೆದಿದೆ ಎಂದು ಕಂಪೆನಿ ಮುಖ್ಯಸ್ಥ ಲ್ಯಾರಿ ಎಲಿಸನ್ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X