ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಿ ಯಕೃತ್ತು ಜೋಡಣೆ, ಬಿಜಿಎಸ್ ಆಸ್ಪತ್ರೆ ಸಾಧನೆ

By Shami
|
Google Oneindia Kannada News

Dr. Ravindranath
ಬೆಂಗಳೂರು, ಜ .28 : ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪಿನ ವತಿಯಿಂದ ಭಾರತದ ಅತಿ ದೊಡ್ಡ ಬದಲಿ ಲಿವರ್ ಜೋಡಣೆ ಕೇಂದ್ರ ಬೆಂಗಳೂರಿನಲ್ಲಿ ಜನವರಿ 29 ರಿಂದ ಆರಂಭವಾಗಲಿದೆ. ಮೃತರಿಂದ ಹಾಗೂ ಜೀವಂತ ವ್ಯಕ್ತಿಗಳಿಂದ ದಾನವಾಗಿ ಪಡೆದ ಯಕೃತ್ ಜೋಡಣೆ, ಸ್ಪ್ಲಿಟ್ ಮತ್ತು ಆಕ್ಸಿಲಿಯರಿ ಬದಲಿ ಅಂಗ ಜೋಡಣೆ ಒಳಗೊಂಡಂತೆ ಪರಿಪೂರ್ಣ ಶ್ರೇಣಿಯ ಬದಲಿ ಲಿವರ್ ಜೋಡಣೆ ಮಾಡುತ್ತಿರುವ ಭಾರತದ ಏಕೈಕ ಬದಲಿ ಅಂಗ ಜೋಡಣೆಯ ಸೇವಾಸೌಲಭ್ಯ ಹೊಂದಿರುವ ಆಸ್ಪತ್ರೆ ಗ್ಲೋಬಲ್ ಹಾಸ್ಪಿಟಲ್ಸ್ ಆಗಿದೆ.

ಖ್ಯಾತ ಜಠರ ಮತ್ತು ಕರುಳುಗಳ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ, ಗ್ಲ್ಯಾಸ್ಗೋ ಹಾಗೂ ಎಡಿನ್‌ಬರೋದ ಎಫ್‌ಆರ್‌ಸಿಎಸ್ ಪಡೆದಿರುವ ಡಾ.ರವೀಂದ್ರನಾಥ್, ಭಾರತದಲ್ಲಿ ಬದಲಿ ಲಿವರ್ ಜೋಡಣೆ ತಜ್ಞರಲ್ಲಿ ಆದ್ಯಪ್ರವರ್ತಕರಾಗಿದ್ದಾರೆ. ಬ್ರಿಟನ್ನಿನ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಅರಸಿ ಬಂದ ಅತ್ಯುನ್ನತ ಹುದ್ದೆಗಳನ್ನು ತಿರಸ್ಕರಿಸಿದ ಅವರು, ಲಿವರ್ ಸಂಬಂಧಿ ಕಾಯಿಲೆಯ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಬದಲಿ ಲಿವರ್ ಜೋಡಣೆ ಸಾಧ್ಯವಾಗುವಂತೆ ಮಾಡಲು ನೆರವಾಗುವ ಸದುದ್ದೇಶದಿಂದ ಭಾರತಕ್ಕೆ ಹಿಂತಿರುಗಿದ್ದರು. ಈ ಮೊದಲು, ಭಾರತೀಯ ರೋಗಿಗಳು ಬದಲಿ ಲಿವರ್ ಜೋಡಣೆಗಾಗಿ ಯುನೈಟೆಡ್ ಕಿಂಗ್‌ಡಮ್‌ನಂತಹ ದೇಶಗಳಿಗೆ ತೆರಳಿ ಅಲ್ಲಿ ಮೃತ ದಾನಿಗಳಿಂದ ಬದಲಿ ಲಿವರ್ ಪಡೆಯಲು ಅನಿರ್ದಿಷ್ಟಾವಧಿ ಕಾಯಬೇಕಿತ್ತಲ್ಲದೆ, ಬಹಳಷ್ಟು ಹಣವನ್ನೂ ಖರ್ಚು ಮಾಡಬೇಕಿತ್ತು.

ಗ್ಲೋಬಲ್ ಗ್ರೂಪ್, ಪ್ರಸ್ತುತ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಭಾರತದ ಆಸ್ಪತ್ರೆ ಸರಣಿಯಾಗಿದ್ದು ಅತ್ಯುನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಹಲವಾರು ವಿಭಾಗಗಳಲ್ಲಿ ನೀಡುತ್ತಿರುವುದಲ್ಲದೆ, ಲಿವರ್ ಮತ್ತು ಪ್ಯಾಂಕ್ರಿಯಾಸ್‌ಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆ ಹಾಗೂ ಬಹು ಅಂಗ ಬದಲಿ ಜೋಡಣೆ ಮಾಡುವುದರಲ್ಲಿ ಸಾಟಿಯಿಲ್ಲದಂತಹ ಮುಂಚೂಣಿಯ ಸ್ಥಾನದಲ್ಲಿದೆ ಎಂದು ಡಾ. ರವೀಂದ್ರನಾಥ್ ಅವರು ಹೇಳಿದರು.

ವಿಶ್ವಖ್ಯಾತ ಬದಲಿ ಲಿವರ್ ಜೋಡಣೆ ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಡಾ. ಮೊಹಮದ್ ರೇಲಾ, ಭಾರತದಲ್ಲಿ ಗ್ಲೋಬಲ್ ಗ್ರೂಪ್‌ನ ಬದಲಿ ಲಿವರ್ ಜೋಡಣೆ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾರೆ. ಡಾ. ರೇಲಾ ತಮ್ಮ 20 ವರ್ಷದ ವೃತ್ತಿಜೀವನದಲ್ಲಿ 1300 ಕ್ಕೂ ಹೆಚ್ಚಿನ ಲಿವರ್ ಜೋಡಣೆ ಶಸ್ತ್ರಕ್ರಿಯೆಗಳನ್ನು ಮಾಡಿದ್ದಾರಲ್ಲದೆ, 5 ದಿನದ ಶಿಶುವಿಗೆ ಲಿವರ್‌ನ್ನು ಯಶಸ್ವಿಯಾಗಿ ಜೋಡಣೆ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸಾಧನೆ ದಾಖಲಿಸಿದ್ದಾರೆ.

ಡಾ. ರೇಲಾ ಮಕ್ಕಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಲಿವರ್ ಜೋಡಣೆ ಮಾಡಿರುವರಲ್ಲದೆ, ಭಾಗಶಃ ಲಿವರ್ ಜೋಡಣೆ ಮತ್ತು ಆಕ್ಸಿಲಿಯರಿ ಕಸಿಗಳನ್ನೂ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರು,ಹೈದರಾಬಾದ್, ಚೆನ್ನೈನಲ್ಲಿ ಹತ್ತು ಲಿವರ್ ಜೋಡಣೆ ಮಾಡುವ ಶಸ್ತ್ರ ಚಿಕಿತ್ಸಕರಿದ್ದು, ಇದು ದೇಶದಲ್ಲೇ ಅತಿ ದೊಡ್ಡ ಶಸ್ತ್ರಚಿಕಿತ್ಸಕ ತಂಡವೆನಿಸಿದೆ. ಹಲವು ಹೆಪಟಾಲಜಿಸ್ಟ್‌ಗಳು, ತೀವ್ರ ನಿಗಾ ಚಿಕಿತ್ಸೆಯ ತಜ್ಞರು ಹಾಗೂ ಇತರೆ ವೈಶಿಷ್ಟ್ಯಗಳ ಬೆಂಬಲವೂ ಸಹ ಈ ತಂಡಕ್ಕೆ ಇದೆ.

ಗ್ಲೋಬಲ್ ಗ್ರೂಪ್ ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಮೃತ ಅಂಗದಾನಿಗಳಿಂದ ಪಡೆದ ಬದಲಿ ಲಿವರ್‌ಗಳ ಜೋಡಣೆ ಸಾಧನೆಯ ಹೆಗ್ಗಳಿಕೆ ಹೊಂದಿದೆ. ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಉಪಾಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ಅವರು ಮಾತನಾಡಿ, “ಗ್ಲೋಬಲ್ ದೇಶದಲ್ಲೇ ಅತಿ ದೊಡ್ಡ ಬದಲಿ ಲಿವರ್ ಜೋಡಣೆ ಕೇಂದ್ರವನ್ನು ಹೊಂದಿದೆಯಲ್ಲದೆ ಅತಿ ಹೆಚ್ಚಿನ ಸಂಖ್ಯೆಯ ತಜ್ಞ ಲಿವರ್ ಶಸ್ತ್ರಚಿಕಿತ್ಸಕರು, ಹೆಪಟಾಲೊಜಿಸ್ಟ್‌ಗಳು, ಲಿವರ್ ಅರಿವಳಿಕೆ ತಜ್ಞರು ಹಾಗೂ ತೀವ್ರ ನಿಗಾಘಟಕದ ತಜ್ಞರನ್ನು ಒಳಗೊಂಡಿದೆ. ಇದಕ್ಕಾಗಿ ಗರಿಷ್ಠ ಸಂಖ್ಯೆಯ ಸುಸಜ್ಜಿತ ಐಸಿಯು ಹಾಸಿಗೆಗಳನ್ನು ಮೀಸಲಿಟ್ಟಿದೆ. ಬದಲಿ ಲಿವರ್ ಜೋಡಣಾ ತಂಡವು ಅತ್ಯುನ್ನತ ಪರಿಣತಿ ಪಡೆದಿರುವ ಶಸ್ತ್ರ ಚಿಕಿತ್ಸೆ, ಅನೆಸ್ತೇಷಿಯಾ, ಹೆಪಟಾಲಜಿ, ಕ್ರಿಟಿಕಲ್ ಕೇರ್, ಇಂಟರ್‌ವೆನ್ಷನಲ್ ರೇಡಿಯಾಲಜಿ, ಇಮೇಜಿಂಗ್ ಮತ್ತು ನ್ಯೂಕ್ಲಿಯರ್ ಮೆಡಿಸಿನ್, ಎಂಡೋಸ್ಕೋಪಿ, ಮೈಕ್ರೋಬಯಾಲಜಿ, ಇಮ್ಯೂನಾಲಜಿ ಮತ್ತು ಬ್ಲಡ್ ಟ್ರಾನ್ಸ್‌ಫ್ಯೂಷನ್ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಒಳಗೊಂಡಿದೆ" ಎಂದು ಹೇಳಿದರು.

ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಲಿವರ್ ಮತ್ತು ಪ್ಯಾಂಕ್ರಿಯಾ ಲಿವರ್ ಜೋಡಣಾ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಶುಕ್ರವಾರ ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X