ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವದ ಹಂಗು ತೊರೆದು ರಕ್ಷಣೆಗೆ ನಿಂತರು

By Mahesh
|
Google Oneindia Kannada News

Bellary Bulding collapse
ಬಳ್ಳಾರಿ, ಜ. 27 : ನಿರ್ಮಾಣ ಹಂತದಲ್ಲಿದ್ದ ಆರು ಅಂತಸ್ತಿನ ಅಪಾರ್ಟ್ಮೆಂಟ್ ಮಂಗಳವಾರ ರಾತ್ರಿ ಕುಸಿದ ಕಾರಣ ಆರು ಜನರು ಮೃತಪಟ್ಟಿದ್ದು ಅವಶೇಷಗಳ ಅಡಿ ಸಿಲುಕಿರುವವರನ್ನು ಹೊರಗೆತೆಯವ ಕಾರ್ಯ ಭರದಿಂದ ಸಾಗಿದೆ. ಮೃತರಲ್ಲಿ ಕಟ್ಟಡದ ಪಕ್ಕದ ಬಿಸಿಎಂ ಹಾಸ್ಟೆಲ್ನ ವಿದ್ಯಾರ್ಥಿಗಳಾದ ರುದ್ರಗೌಡ (21) ಮತ್ತು ಮಹೇಂದ್ರ (18) ಹಾಗೂ ಓರ್ವ ಮಹಿಳೆ ಸೇರಿ ಒಟ್ಟು ಆರು ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಒಂದು ಲಕ್ಷ ರು ಪರಿಹಾರ ಧನ ನೀಡುವುದಾಗಿ ಸಚಿವ ಕರುಣಾಕರ ರೆಡ್ಡಿ ಘೋಷಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 102 ಸದಸ್ಯರ ತಂಡವು ಪೂನಾದಿಂದ ಬುಧವಾರ ಬೆಳಗ್ಗೆ 11.15 ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಕಟ್ಟಡದ ಅಡಿಯಲ್ಲಿ ಸಿಲುಕಿರುವ ನತದೃಷ್ಠರನ್ನು ಹೊರತೆಗೆಯುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಹಿರಿಯ ಅಧಿಕಾರಿ ಜೀಜಾ ಹರಿನಾಥ್ ಅವರು ಈ ತಂಡದ ನೇತೃತ್ವವನ್ನು ವಹಿಸಿದ್ದಾರೆ ಚೆನ್ನೈನಿಂದ 40 ಜನ ಸೈನಿಕರು ಕೂಡ ಆಗಮಿಸಿದ್ದಾರೆ

ವಿಪತ್ತು ನಿರ್ವಹಣೆ:ಅಲ್ಲದೇ ರಾಷ್ಟ್ರಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಶೇಷ ತರಬೇತಿ ಪಡೆದಿರುವ 2 ಶ್ವಾನಗಳನ್ನು ಕೂಡ ಪರಿಹಾರ ಕಾರ್ಯದಲ್ಲಿ ತೊಡಗಿಸಿದ್ದು ಕಟ್ಟಡದ ಕೆಳಗಿನ ಜೀವಂತ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ನೆರವು ನೀಡುತ್ತಿವೆ.ಅಲ್ಲದೇ ಅಗ್ನಿಶಾಮಕದಳದ 40 ಸಿಬ್ಬಂದಿ 20 ಜನ ಸಿವಿಲ್ ಇಂಜಿನಿಯರ್ಗಳು ಹಾಗೂ ವಿಸ್ಮ್ನ 25 ಕ್ಕೂ ಹೆಚ್ಚಿನ ವೈದ್ಯರು ಹಾಗೂ ಸಿಬ್ಬಂದಿ ಸ್ಥಳದಲ್ಲೆ ಇದ್ದು ನತದೃಷ್ಟರನ್ನು ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ

ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರು ಪರಿಹಾರ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿನ್ನು ಒಟ್ಟು ನಾಲ್ಕು ತಂಡಗಳಾಗಿ ರಚಿಸಲಾಗಿದ್ದು ಪ್ರತೀ ಒಂದು ತಂಡವು ಕೇವಲ ನಾಲ್ಕು ತಾಸುಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದೆ . ಈ ಘಟನೆಯಲ್ಲಿ ಅದೃಷ್ಠವಶಾತ್ ಯಲ್ಲಪ್ಪ (09), ರಾಜು (24), ಸಾರಾಬಾನ್ (25) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಇವರು ಎಲ್ಲರೂ ಗುಲ್ಬರ್ಗಾದ ಚಿತ್ತಾಪೂರ ತಾಲೂಕಿಗೆ ಸೇರಿದವರು ಎನ್ನಲಾಗಿದ್ದು ಮಾನಸಿಕ ಆಘಾತಕ್ಕೆ ಒಳಗಾಗಿರುವ ಇವರನ್ನು ವಿಜಯನಗರ ವಿಎಂಎಸ್ ವಿಸ್ಮ್ಗೆ ದಾಖಲಿಸಲಾಗಿದೆ.

ಬಂಧನ ವಶಕ್ಕೆ:ಈ ಕಟ್ಟಡದ ಪಾಲುದಾರ, ಇಂಜಿನಿಯರ್ ಎಚ್.ಎಂ. ಸೋಮಶೇಖರ್ ಅವರ ಕಚೇರಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಅವರನ್ನು ಕೂಡ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರ:ಈ ಘಟನೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಿ. ಕರುಣಾಕರರೆಡ್ಡಿ ಇಂಜಿಯರ್ ಎಚ್.ಎಂ. ಸೋಮಶೇಖರ್ ಅವರ ಕಟ್ಟಡ ನಿರ್ಮಾಣ ಲೈಸನ್ಸ್ ರದ್ದತಿಗೆ ಶಿಫಾರಸು ಮಾಡಲಾಗುತ್ತದೆ. ಇವರು ನಿರ್ಮಿಸಿರುವ 100ಕ್ಕೂ ಹೆಚ್ಚಿನ ಕಟ್ಟಡಗಳ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ ಅಲ್ಲದೇ ಈ ಕಟ್ಟಡ ನಿರ್ಮಾಣಕ್ಕೆ 2006 - 07 ರಲ್ಲೆ ಪರವಾನಿಗೆ ನೀಡಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ಫರೂಫ್ ಅವರನ್ನು ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜನಜಾತ್ರೆ :ಈ ಘಟನೆ ನಡೆದ ಸ್ಥಳಕ್ಕೆ ಬಳ್ಳಾರಿ ನಗರದ ಜನತೆ ಸೇರಿ ಬಿಸಿಎಂ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳ ಪೋಷಕರು ತಂಡೋಪತಂಡವಾಗಿ ಆಗಮಿಸಿ ಪರಿಹಾರ ಕಾರ್ಯವನ್ನು ಅತ್ಯಂತ ಕುತೂಹಲಗಳಿಂದ ವೀಕ್ಷಿಸುತ್ತಿದ್ದಾರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಕಾರಣ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಲ್ಲಿ ಅಡೆತಡೆ ಆಗುತ್ತಿದೆ

ಹಿನ್ನೆಲೆ: ಮಂಗಳವಾರ ರಾತ್ರಿ ಸಮಯ 8.30 - 8.45 ರ ಸುಮಾರಿಗೆ ಗಾಂಧಿನಗರದ 2ನೇ ಕ್ರಾಸ್ನಲ್ಲಿ ಈ ದುರ್ಘಟನೆ ನಡೆದಿದ್ದು ಕಟ್ಟಡದ ನೆಲಮಾಳಿಗೆ ಮತ್ತು ಮೊದಲನೇ ಅಂತಸ್ತು ಕುಸಿದಿದೆ.

ಮೆಚ್ಚುಗೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎನ್. ರುದ್ರಗೌಡ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ದೇವೇಂದ್ರ ಅವರು ಪ್ರಾಣದ ಹಂಗನ್ನು ತೊರೆದು ಅವಶೇಷಗಳ ಅಡಿ ಸಿಲುಕಿಲುವವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು ಅನೇಕರಲ್ಲಿ ಮೆಚ್ಚುಗೆಗೆ ಕಾರಣವಾಗಿತ್ತು ಅಲ್ಲದೇ ಈ ಇಬ್ಬರ ವೈಯಕ್ತಿಕ ಪಾಲ್ಗೊಳ್ಳುವಿಕೆ ಮತ್ತು ಮುಂಜಾಗ್ರತಾ ಕ್ರಮಗಳಿಂದ ಮೂವರು ಜೀವಂತವಾಗಿ ಕಟ್ಟಡದಿಂದ ಹೊರಕ್ಕೆ ಬಂದಿದ್ದು ವಿಶೇಷವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X