ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪತ್ತು ನಿರ್ವಹಣೆ : ನಮ್ಮಲ್ಲೆಷ್ಟಿದೆ ಜಾಗೃತಿ?

By Prasad
|
Google Oneindia Kannada News

Jija Hari Singh
ಬೆಂಗಳೂರು, ಜ. 27 : ಪ್ರಕೃತಿ ವಿಕೋಪಗಳನ್ನು ತಡೆಗಟ್ಟುವುದಂತೂ ಸಾಧ್ಯವಿಲ್ಲ. ಆದರೆ, ಪ್ರಕೃತಿ ವಿಕೋಪ, ಕೈಮೀರಿದ ಅವಘಡಗಳು ಸಂಭವಿಸಿದಾಗ ಹೆಚ್ಚಿನ ಅನಾಹುತ ಆಗದಂತೆ ತಡೆಯಲು ನಾವೆಷ್ಟು ಸಿದ್ಧರಾಗಿದ್ದೇವೆ ಎಂಬುದು ನಿಜಕ್ಕೂ ಉತ್ತರಿಸಬೇಕಾದ ಪ್ರಶ್ನೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಅಭಿಷೇಕ್ ಎಂಬ ಬಾಲಕ ಕೊಚ್ಚಿಹೋಗಿದ್ದು, ಉತ್ತರ ಕರ್ನಾಟಕದಲ್ಲಿ ಉಂಟಾದ ಅತಿವೃಷ್ಟಿಗಳು ನಮ್ಮ ಸ್ಮೃತಿಪಟಲದಿಂದ ಇನ್ನೂ ಅಳಿಸಿಹೋಗಿಲ್ಲ. ನಿನ್ನೆ ರಾತ್ರಿ ಬಳ್ಳಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಆರು ಮಹಡಿಯ ಕಟ್ಟಡ ಕುಸಿತ ಉಂಟಾಗಿದೆ. ಕಟ್ಟಡದ ಅಡಿಯಲ್ಲಿ ಸಿಲುಕಿರುವ 40ಕ್ಕೂ ಹೆಚ್ಚಿನ ಜನರನ್ನು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ. ಆಪತ್ತು ನಿರ್ವಹಣೆಯಲ್ಲಿ ನಾವೆಷ್ಟು ಹಿಂದಿದ್ದೇವೆ ಎಂಬುದಕ್ಕೆ ಈ ಘಟನೆ ಕೂಡ ಸಾಕ್ಷಿ.

ಇಂಥ ಆಪತ್ತುಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇರುತ್ತವೆ. ಆಪತ್ತು ನಿರ್ವಹಣೆಗಾಗಿ ಕೂಡ ಅನೇಕ ಸರಕಾರಿ, ಸರಕಾರೇತರ, ಖಾಸಗಿ ಸಂಘ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿರುತ್ತವೆ. ಆದರೆ, ಅನಾಹುತದ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಸೂಕ್ತ ದಾರಿ ಕಂಡುಕೊಳ್ಳಬೇಕಿದೆ, ಪರಿಣಾಮಕಾರಿದ ಚರ್ಚೆ ನಡೆಯಬೇಕಿದೆ. ಆಪತ್ತು ನಿರ್ವಹಣೆಯ ಕುರಿತು ಸರಕಾರ, ನಾಗರಿಕರು ಕೂಡ ಜಾಗೃತರಾಗಬೇಕಿದೆ.

ಇದಕ್ಕಾಗಿಯೇ, ಆಪತ್ತು ನಿರ್ವಹಣೆಯ ಕುರಿತು ಜನಜಾಗೃತಿ ಮೂಡಿಸಲು ನಾಗರಿಕ ರಕ್ಷಣಾ ಪಡೆ ಜನೆವರಿ 29, ಶುಕ್ರವಾರ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಮಿನಸ್ಕ್ ವೃತ್ತದಲ್ಲಿ ಬೃಹತ್ ರ‌್ಯಾಲಿ ಆಯೋಜಿಸಿದೆ. ಬೆಳಿಗ್ಗೆ 7.30ಕ್ಕೆ ಜರುಗಲಿರುವ ಈ ರ‌್ಯಾಲಿಯಲ್ಲಿ ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿಗಳು, ಸ್ವಯಂಸೇವಕರು ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಎಂಥದೇ ಆಪತ್ತು ಘಟಿಸಿದಾಗ ನಮ್ಮನ್ನು ನಾವು ಆಪತ್ತು ನಿರ್ವಹಣೆಗೆ ಹೇಗೆ ಸಿದ್ಧಗೊಳ್ಳಬೇಕು ಎಂಬ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ ನಾಗರಿಕ ರಕ್ಷಣಾ ಸಿಬ್ಬಂದಿಗಳು.

ಇದರಲ್ಲಿ ನಾಗರಿಕರು ಭಾಗವಹಿಸಿ ಆಪತ್ತು ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶ್ರುತಿ (09743017637)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X