ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾತ್ರರಿಗೆ ಪದ್ಮ : ಕಳಂಕ ಮೆತ್ತಿಕೊಂಡ ಕೇಂದ್ರ

By Prasad
|
Google Oneindia Kannada News

Sant Singh Chatwal
ನವದೆಹಲಿ, ಜ. 26 : ಈ ಬಾರಿ ಕೆಲ ಅಪಾತ್ರರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಕಳಂಕವನ್ನು ಕೇಂದ್ರ ಸರಕಾರ ಮೆತ್ತಿಕೊಂಡಿದೆ. ಅಮೆರಿಕಾದಲ್ಲಿ ನೆಲೆಯೂರಿರುವ ಭಾರತದ ಹೊಟೇಲಿಗ ಸಂತ್ ಸಿಂಗ್ ಚಟ್ವಲ್ ಅವರಿಗೆ ಪದ್ಮಭೂಷಣ ನೀಡಿದ್ದಕ್ಕೆ ಬಿಜೆಪಿ ಕೆಂಗಣ್ಣಾಗಿದೆ.

9 ಮಿಲಿಯನ್ ಡಾಲರಿನಷ್ಟು ಬ್ಯಾಂಕಿಗೆ ವಂಚಿಸಿದ್ದಕ್ಕಾಗಿ ಚಟ್ವಲ್ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಬಂಧನಕ್ಕೆ ಕೂಡ ಒಳಗಾಗಿದ್ದರು. ಚಟ್ವಲ್ ಅವರನ್ನು ಉನ್ನತ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇಕೆಂದು ಪ್ರಶ್ನಿಸಿ ವಿರೋಧ ಪಕ್ಷದ ಉಪನಾಯಕ ಗೋಪಿನಾಥ್ ಮುಂಡೆ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಚಟ್ವಲ್, ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವ ಪಕ್ಷ ಇದನ್ನು ವಿರೋಧಿಸಿದೆಯೆಂದು ತಲೆಕೆಡಿಸಿಕೊಳ್ಳುವುದಿಲ್ಲ. 30 ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ. ನನಗೆ ಅತೀವ ಸಂತೋಷವಾಗಿದೆ. ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ಸೈಫ್ ಅಲಿ ಖಾನ್ ಪ್ರಶಸ್ತಿಗೆ ಅರ್ಹರೆ? : ವಿಪರೀತ ಮ್ಯಾನರಿಸಂನಿಂದ ಖ್ಯಾತರಾಗಿರುವ ಸೈಫ್ ಅಲಿ ಖಾನ್ ಅವರಿಗೆ ಪದ್ಮಶ್ಮೀ ಪ್ರಶಸ್ತಿ ನೀಡಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ. ಹಮ್ ಸಾಥ್ ಸಾಥ್ ಹೈ ಚಿತ್ರೀಕರಣ ಸಂದರ್ಭದಲ್ಲಿ 1998ರಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಎರಡು ಚಿಂಕಾರಾ ಪ್ರಾಣಿಗಳನ್ನು ಹತ್ಯೆಗೈದಿರುವ ಆರೋಪ ಸೈಫ್ ಎದುರಿಸುತ್ತಿದ್ದರು. ಆರೋಪದಿಂದ ಅವರು ಹೊರಬಂದಿದ್ದಾರಾದರೂ ಕಳಂಕಿತರು ಪ್ರಶಸ್ತಿಗೆ ಹೇಗೆ ಅರ್ಹರು ಎಂಬು ಪ್ರಶ್ನೆ ಉದ್ಭವವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X