ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವಿನ್ಯಾಸದ ವಿಡಿಯೋಕಾನ್ ಮೊಬೈಲ್

By Mahesh
|
Google Oneindia Kannada News

Videocon Likely To Launch 15 Mobile Handset Models
ಮುಂಬೈ, ಜ. 25: ಮೊಬೈಲ್ ಹ್ಯಾಂಡ್ ಸೆಟ್ ಕ್ಷೇತ್ರಕ್ಕೆ ಇತ್ತೀಚೆಗೆ ಕಾಲಿಟ್ಟಿರುವ ವಿಡಿಯೋಕಾನ್,ಇನ್ನು ಕೆಲವು ತಿಂಗಳುಗಳಲ್ಲಿ 15 ಕ್ಕೂ ಹೆಚ್ಚು ಹೊಸ ವಿನ್ಯಾಸದ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಗ್ರಾಹಕರಿಗೆ ಪರಿಚಯಿಸುವುದಾಗಿ ಪ್ರಕಟಿಸಿದೆ. ಭಾರತೀಯ ಗ್ರಾಹಕರ ನಾಡಿಮಿಡಿತವನ್ನು ಅರಿತು ಅವರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ರೂಪಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ವಿವಿಧ ಬಗೆಯ ಆಕರ್ಷಕ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಹೊಂದುವುದು ಭಾರತೀಯ ಯುವ ಜನಾಂಗದ ಕನಸಾಗಿದೆ. ಅದರಲ್ಲೂ ಕೈಗೆಟಕುವ ದರದಲ್ಲಿ ಡುಯಲ್ ಸಿಮ್ ಸೌಲಭ್ಯವಿರುವ ಹ್ಯಾಂಡ್ ಸೆಟ್ ಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ 12ಕ್ಕೂ ಹೆಚ್ಚು ವಿಡಿಯೋಕಾನ್ ಮೊಬೈಲ್ ಹ್ಯಾಂಡ್ ಸೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ 15 ಕ್ಕೂ ಹೆಚ್ಚು ವಿನ್ಯಾಸಗಳನ್ನು ಹೊರತರಲಾಗುವುದು ಅವುಗಳಲ್ಲಿ ಡುಯಲ್ ಸಿಮ್( ಎರಡು ಬೇರೆ ಬೇರೆ ಸೇವಾ ಸಂಸ್ಥೆಯ ( ಏರ್ ಟೆಲ್ , ಡೊಕೊಮೊ) ಸಿಮ್ ಗಳನ್ನು ಒಂದೇ ಮೊಬೈಲ್ ನಲ್ಲಿ ಉಪಯೋಗಿಸುವ ಸೌಲಭ್ಯ) ಇರುವ ಹ್ಯಾಂಡ್ ಸೆಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ ಎಂದು ವಿಡಿಯೋಕಾನ್ ಸಂಸ್ಥೆಯ ಸಿಒಒ ರಾಹುಲ್ ಗೋಯಲ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X