• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಳೆ ಪೂನಾವಾಲಾ ಬೆಂಗಳೂರು ಡರ್ಬಿ

By Shami
|

ಬೆಂಗಳೂರು, ಜ.25:ಕುದುರೆ ರೇಸು ಪ್ರಿಯರ ಕರಗ ಮಹೋತ್ಸವ ಪೂನಾವಾಲಾ ಬೆಂಗಳೂರು ಡರ್ಬಿ ರೇಸು ಜನವರಿ 26 ರ ಮಂಗಳವಾರ ಬೆಂಗಳೂರು ಟರ್ಫ್ ಕ್ಲಬ್ಬಿನಲ್ಲಿ ನಡೆಯಲಿದೆ. ಬೆಂಗಳೂರು ಚಳಿಗಾದ ರೇಸುಗಳ ಪ್ರಮುಖ ಆಕರ್ಷಣೆಯಾಗಿರುವ ಡರ್ಬಿ ರೇಸಿನ ದಿನವಾದ ನಾಳೆ ಟರ್ಫ್ ಕ್ಲಬ್ಬಿನಲ್ಲಿ ಪಂದ್ಯಾವಳಿಗಳನ್ನು ನೋಡಲು ಮತ್ತು ಕುದುರೆ ಬಾಲಕ್ಕೆ ದುಡ್ಡು ಕಟ್ಟಲು ಜನಜಂಗುಳಿಯೇ ಸೇರುತ್ತದೆ.

ರೇಸಿಗೆ ಕ್ರೀಡಾಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಕ್ಲಬ್ಬಿನ ಆಡಳಿತ ವರ್ಗವು ಕ್ರೀಡಾಭಿಮಾನಿಗಳಿಗೆ ಉಚಿತ ಕೌಶಲ್ಯ ಸ್ಪರ್ಧೆ ಇಟ್ಟಿದೆ. ಡರ್ಬಿ ಪಂದ್ಯದಲ್ಲಿ ಕ್ರಮವಾಗಿ ಪ್ರಥಮ ನಾಲಕ್ಕು ಸ್ಥಾನಗಳನ್ನು ಪಡೆಯುವ ಕುದುರೆಗಳನ್ನು ಹೆಸರಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.

ಬಹುಮಾನಗಳು ಕ್ರಮವಾಗಿ ಮಾರುತಿ ಕಾರು, ಹೀರೋ ಹೋಂಡ ಆಕ್ಟಿವ, ಹೀರೋ ಹೊಂಡ ಪ್ಲೆಷರ್, ಎಲ್ ಜಿ ಎಲ್ ಸಿಡಿ ಟಿವಿ ಹಾಗೂ ಹದಿನೈದು ಸಮಾಧಾನಕರ ಉಡುಗೊರೆಗಳನ್ನು ಕೊಡಲಾಗುತ್ತದೆ ಎಂದು ಬಿಟಿಸಿ ಪ್ರಕಟಣೆ ತಿಳಿಸಿದೆ. ಕ್ಲಬ್ಬಿನ ಆವರಣದಲ್ಲಿ ಪ್ರವೇಶ ಪತ್ರಗಳನ್ನು ಪಡೆದು ಭರ್ತಿ ಮಾಡಿ ಮಂಗಳವಾರ ಸಂಜೆ 4 ಗಂಟೆಯೊಳಗೆ ಡಬ್ಬದೊಳಗೆ ಹಾಕಬೇಕು.

ಇದಲ್ಲದೆ,ಅತ್ಯುತ್ತಮ ಪೋಷಾಕು ಧರಿಸಿದ ಮಹಿಳೆ ಮತ್ತು ಪುರಷನಿಗೆ ಆಕರ್ಷಕ ಗಿಫ್ಟ್ ವೋಚರುಗಳು ಲಭ್ಯವಾಗಲಿವೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮೊದಲ ಹತ್ತು ಸಾವಿರ ಪ್ರವೇಶ ಟಿಕೆಟ್ ಪಡೆದವರಿಗೆ ಮಾತ್ರ ಅವಕಾಶ ಇರುತ್ತದೆ.(ಮೊದಲನೆ ಮತ್ತು ಎರಡನೆ ಗೇಟುಗಳಲ್ಲಿ) ಅಧಿಕೃತ ಪ್ರವೇಶ ಪಡೆದವರಿಗೆ 25 ರೂಗಳ ಉಚಿತ ಉಪಾಹಾರ ಕೂಪನ್ನುಗಳನ್ನು ಕೊಡಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more