ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತವನ್ನು ಉಳಿಸಿ ಬೆಳಸಿ: ಕಾಗೇರಿ

By Prasad
|
Google Oneindia Kannada News

Vishvesvara Hegde Kageri
ಬೆಂಗಳೂರು, ಜ. 25: ಸಂಸ್ಕೃತ ಪಾಠಶಾಲೆ ಹಾಗೂ ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು 13 ಕೋಟಿ ರೂ. ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಾಲಭವನದಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಸಂಸ್ಕೃತ ಹಾಗೂ ಸಂಗೀತ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರಿಗೆ ಸಚಿವರು ಪದವಿ/ಪ್ರಶಸ್ತಿ ಪ್ರದಾನ ಮಾಡಿದರು.

ಅನುದಾನದ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಸಂಸ್ಕೃತ ಪ್ರಸಾರಕ್ಕೆ ಉತ್ತೇಜನ ನೀಡಲು ಹೆಚ್ಚು ಸಹಕಾರ ಕೊಡುವಂತೆ ಕೇಳಿಕೊಳ್ಳಲಾಗಿದೆ ಎಂದರು. ಸಂಸ್ಕೃತ ಪಾಠಶಾಲೆ, ಕಾಲೇಜುಗಳಿಗೆ ಗ್ರಂಥಾಲಯ ಒದಗಿಸಲಾಗುವುದು. ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಲಾಗುವುದು. ಅಧ್ಯಾಪಕರಿಗೆ ಸೂಕ್ತ ತರಬೇತಿ ಕೊಡಲಾಗುವುದು. ಸಂಶೋಧನೆ, ಅಧ್ಯಯನಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಸ್ಕೃತದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸುವ ಈ ಘಟಕೋತ್ಸವ 7 ವರ್ಷ ನಡೆದಿರಲಿಲ್ಲ. ಬಿಜೆಪಿ ಸರಕಾರ ಬಂದಾಗಿನಿಂದ ಪುನರಾರಂಭ ಮಾಡಲಾಗಿದೆ. ಹೀಗಾಗಿ ಸತತ 2 ನೇ ಬಾರಿಗೆ ಈ ಸುಸಂದರ್ಭ ಒದಗಿ ಬಂದಿದೆ. ಸಂಸ್ಕೃತಕ್ಕಾಗಿ ನಿಧಿ ಸ್ಥಾಪಿಸಲು ಚಿಂತನೆ ನಡೆದಿದೆ. ಈಗಾಗಲೇ ವಿದ್ಯಾರ್ಥಿ ವೇತನವನ್ನು 45 ರೂ. ದಿಂದ 75 ರೂ. ಗೆ ಹೆಚ್ಚಿಸಲಾಗಿದೆ ಎಂದರು. ವಿದೇಶಿಯರು ಸಂಸ್ಕೃತ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಸಂಸ್ಕೃತದಲ್ಲಿ ಎಲ್ಲ ಭಾಷೆಯ ಸತ್ವ, ತತ್ವಜ್ಞಾನ ಅಡಗಿದೆ. ಹೀಗಾಗಿ ಪಾಲಕರು ಮಕ್ಕಳನ್ನು ಈ ನಿಟ್ಟಿನಲ್ಲಿ ಅಣಿಗೊಳಿಸಬೇಕು ಎಂದರು.

ಕೈಲಾಸಾಶ್ರಮದ ಶ್ರೀ ಆದಿದೇವಾನಂದ ಸ್ವಾಮೀಜಿ ಮಾತನಾಡಿ, ಕೆಲವರು ಅನಗತ್ಯವಾಗಿ ಸಂಸ್ಕೃತವನ್ನು ವಿರೋಧಿಸುತ್ತಿದ್ದಾರೆ. ಇದರಿಂದ ಯಾವ ಸಾಧನೆ ಆಗುವುದಿಲ್ಲ. ಸಂಸ್ಕೃತ ಬೇಡ ಎನ್ನುವವರು ಉರ್ದು ವಿಶ್ವವಿದ್ಯಾಲಯಕ್ಕಾಗಿ ಸಲಹೆ ನೀಡಿದ್ದಾರೆ. ಈ ರೀತಿಯ ದ್ವಂದ್ವ ಏಕೆ ಎಂದು ಪ್ರಶ್ನಿಸಿದರು. ಒಟ್ಟು 114 ವಿದ್ಯಾರ್ಥಿಗಳಿಗೆ ಪದವಿ/ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರ.ಗೋ. ನಡಾದೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X