ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಸೇನಾಪಡೆ ಮುಖ್ಯಸ್ಥರಾಗಿ ವಿಕೆ ಸಿಂಗ್

By Mrutyunjaya Kalmat
|
Google Oneindia Kannada News

Lt Gen. VK Singh
ನವದೆಹಲಿ, ಜ. 22 : ಪೂರ್ವ ವಲಯ ಸೇನಾಪಡೆಯ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ವಿ ಕೆ ಸಿಂಗ್ ಅವರು ಭಾರತೀಯ ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಸೇನಾಪಡೆ ಮುಖ್ಯಸ್ಥರಾಗಿರುವ ದೀಪಕ್ ಕಪೂರ್ ಅವರ ಅಧಿಕಾರಾವಧಿ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದ್ದು, ಅಂದೇ ವಿ ಕೆ ಸಿಂಗ್ ಅಧಿಕಾರ ಸ್ವೀಕರಿಸಲಿದ್ದಾರೆ.

1970 ರಲ್ಲಿ ಸೇನಾಪಡೆಯ ರಜಪೂತ್ ರಜಿಮೆಂಟ್ ಪಡೆಗೆ ಸೇರ್ಪಡೆಯಾದ ವಿ ಕೆ ಸಿಂಗ್ ಸುಮಾರು 40 ವರ್ಷಗಳ ಕಾಲ ಸೇನಾಪಡೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಿ ಕೆ ಸಿಂಗ್ ಅವರು ಪೂರ್ವ ವಲಯದ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಕೆ ಸಿಂಗ್ ಅಮೆರಿಕದ ಸೇನಾ ಇನ್ಫೆಂಟ್ರಿ ಶಾಲೆಯಲ್ಲಿ ಪದವಿ ಗಳಿಸಿದ್ದು, ನಂತರ ಭಾರತೀಯ ರಕ್ಷಣಾ ಸೇವೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಅಮೆರಿಕ ಮತ್ತು ಭಾರತದ ಯುದ್ಧ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ವಿಕೆ ಸಿಂಗ್ ಅವರು ಸೇವಾವಧಿಯಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದು, ಸೇನಾಪಡೆಯಲ್ಲಿ ಶ್ರೇಷ್ಠ ಎನಿಸಿರುವ ಪಿವಿಎಸ್ಎಂ, ಎವಿಎಂಎಸ್, ವೈಎಸ್ಎಂ ಮತ್ತು ಸಿ-ಕಮಾಂಡೆಂಟ್ ಪ್ರಶಸ್ತಿಗಳು ಇವರ ಮುಡಿಗೇರಿವೆ. ಭಾರತಿ ಸಿಂಗ್ ಎಂಬುವವರನ್ನು ಮದುವೆಯಾಗಿರುವ ವಿಕೆ ಸಿಂಗ್, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗಳು ಸೇನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಕಿರಿಯ ಮಗ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X