ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಳ್ಳಿ ಬ್ರಾಹ್ಮಣರ ವಶಕ್ಕೆ ಅಂಬಲಪಾಡಿ ದೇವಾಲಯ

By Mrutyunjaya Kalmat
|
Google Oneindia Kannada News

Govt to plan Ambalapady temple may transfer
ಉಡುಪಿ, ಜ. 21 : ಐದು ಶತಮಾನಗಳ ಇತಿಹಾಸವಿರುವ ನಗರದ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಾಲಯವನ್ನು ರಾಜ್ಯ ಸರಕಾರ ಮುಜರಾಯಿ ವ್ಯಾಪ್ತಿಯಿಂದ ಶಿವಳ್ಳಿ ಬ್ರಾಹ್ಮಣರ ವಶಕ್ಕೆ ಹಸ್ತಾಂತರಿಸಲು ಸದ್ದಿಲ್ಲದೇ ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎರಡನೇ ದೇವಾಲಯವನ್ನು ಖಾಸಗಿಯವರಿಗೆ ಒಪ್ಪಿಸುವ ಪ್ರಕ್ರಿಯೆ ಇದಾಗಿದ್ದು, ಈಗಾಗಲೇ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಒಪ್ಪಿಸಲಾಗಿತ್ತು.

ವಂಶಪಾರಂಪರಿಕ ಸಂಬಂಧದ ಹಿನ್ನಲೆಯಲ್ಲಿ ದೇವಾಲಯವನ್ನು ಶಿವಳ್ಳಿ ಬ್ರಾಹ್ಮಣರ ವಶಕ್ಕೆ ನೀಡಲು ಸರಕಾರ ತಯಾರಿ ನಡೆಸಿದೆ. ಈ ದೇವಾಲಯಕ್ಕೆ ವಾರ್ಷಿಕ ಸುಮಾರು ಎರಡು ಕೋಟಿ ಆದಾಯ ಹೊಂದಿದ್ದು 3.5 ಎಕರೆ ಜಮೀನು ಒಡೆತನವನ್ನು ಹೊಂದಿದೆ. ಆದರೆ, ಕೆಲವು ತಿಂಗಳ ಹಿಂದೆ ಖಾತೆಯ ಹಿಂದಿನ ಕಾರ್ಯದರ್ಶಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ದೇವಾಲಯವನ್ನು ಖಾತೆಯ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರ ತೆಗೆದು ಕೊಳ್ಳಬಾರದೆಂದು ಪತ್ರ ವ್ಯವಹಾರ ನಡೆಸಿದ್ದರೆನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ವಿ ಎಸ್ ಆಚಾರ್ಯ, ದೇವಾಲಯ ಹಸ್ತಾಂತರ ಮಾಡುವಂತೆ ಶಿವಳ್ಳಿ ಬ್ರಾಹ್ಮಣರು ಸಲ್ಲಿಸಿರುವ ಮನವಿ ಸರಕಾರದ ಮುಂದೆ ಇದೆ. ಬೇರೆ ಬೇರೆ ಸಮುದಾಯದ ಜನರು ದೇವಾಲಯವನ್ನು ನಿರ್ವಹಣೆ ಮಾಡಿದ ನಿದರ್ಶನಗಳಿವೆ. ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರ ಸಲಹೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X