ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ನ್ಯಾಯಮೂರ್ತಿಗೆ ಜೀವಾವಧಿ ಶಿಕ್ಷೆ!

By Mrutyunjaya Kalmat
|
Google Oneindia Kannada News

Huang Songyou
ಬೀಜಿಂಗ್, ಜ. 20 : ಭ್ರಷ್ಟಾಚಾರ ನಡೆಸುವ ಮೂಲಕ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡ ಸುಪ್ರಿಂಕೋರ್ಟ್ ಮಾಜಿ ನ್ಯಾಯಮೂರ್ತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಲ್ಯಾಂಗ್ ಫ್ಯಾಂಗ್ ಜನತಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ಹುನಾಂಗ್ ಸಾಂಗ್ಯೂ (52) ಶಿಕ್ಷೆಗೊಳಗಾದ ಸುಪ್ರಿಂಕೋರ್ಟ್ ನ್ಯಾಯಮೂರ್ತಿ. 5 ಲಕ್ಷ ಡಾಲರ್ ಅಧಿಕ ಮೊತ್ತವನ್ನು ಲಂಚವಾಗಿ ಪಡೆದಿರುವದನ್ನು ಹಾಗೂ ಸಾರ್ವಜನಿಕ ಹಣವನ್ನು ಸ್ವಂತಕ್ಕೆ ಬಳಿಸಿಕೊಂಡಿದ್ದನ್ನು ವಿಚಾರಣೆ ವೇಳೆ ಆರೋಪಿ ನ್ಯಾಯಮೂರ್ತಿಗಳು ತಪ್ಪೊಪ್ಪಿಕೊಂಡಿದ್ದರು. ಸಾಂಗ್ಯೂ ಅವರು ಚೀನಾದ ಜನತಾ ಸುಪ್ರಿಂ ನ್ಯಾಯಾಲಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭ್ರಷ್ಟಾಚಾರದ ಆರೋಪದಡಿಯಲ್ಲಿ ಶಿಕ್ಷೆಗೆ ಒಳಗಾದ ಚೀನಾದ ಎರಡನೇ ಉನ್ನತ ಅಧಿಕಾರಿ ಇವರಾಗಿದ್ದಾರೆ.

2005 ರಿಂದ 2008ರ ವರೆಗೆ ಇವರು 5,74 ಲಕ್ಷ ಡಾಲರ್ ಅನ್ನು ಲಂಚವಾಗಿ ಪಡೆದುಕೊಂಡಿದ್ದರು. 1997ರಲ್ಲಿ ಝಾನ್ ಜಿ ಅವರು ಯಾಂಗ್ ನಗರ ಜನತಾ ನ್ಯಾಯಾಲಯದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1.2 ಮಿಲಿಯನ್ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ಅವರಿಗೆ ಜೀವಾವಧಿ ಮಾತ್ರವಲ್ಲದೆ, ಅವರ ಸಮಸ್ತ ಆಸ್ತಿಯನ್ನು ಚೀನಾ ಸರಕಾರ ಮುಟ್ಟುಗೋಲು ಹಾಕಿಕೊಂಡಿದ್ದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ವಿಚಾರಣೆ ನ್ಯಾಯಾಲಯದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X