ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್-3 ಹರಾಜು ಬಾಂಡ್ ಮೇಲೆ ಎಲ್ಲರ ಕಣ್ಣು

|
Google Oneindia Kannada News

Bond on Daredevils and Knight Riders radar
ಮುಂಬೈ, ಜ. 18: ಐಪಿಎಲ್-3 ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡುವ ಆಟಗಾರರ ಹರಾಜು ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆಯಲಿದೆ. ವಿವಿಧ ದೇಶಗಳ ಸುಮಾರು 60 ಕ್ಕೂ ಹೆಚ್ಚು ಮಂದಿ ಆಟಗಾರರ ಮೇಲೆ ಬಿಡ್ ಮಾಡಲಾಗುತ್ತದೆ. ನ್ಯೂಜಿಲ್ಯಾಂಡ್ ನ ವೇಗಿ ಶೇನ್ ಬಾಂಡ್ ಮೇಲೆ ಎಲ್ಲಾ ಪ್ರಾಂಚೈಸಿಗಳ ಕಣ್ಣಿದ್ದು, ಪ್ರಮುಖವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ ತಂಡ ಉತ್ಸುಕತೆ ತೋರಿದೆ ಎನ್ನಲಾಗಿದೆ.

ಪ್ರತಿ ಐಪಿಎಲ್ ತಂಡಗಳು ಎರಡು ಅಥವಾ ಮೂರು ಆಟಗಾರರನ್ನು ಮಾತ್ರ ತಮ್ಮ ತೆಕ್ಕೆಗೆ ಪಡೆಯುವ ಅವಕಾಶವಿರುತ್ತದೆ.ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡಿನ ಶೇನ್ ಬಾಂಡ್ ,ವೆಸ್ಟ್‌ಇಂಡೀಸ್‌ನ ಟ್ರಿನಿಡಾಡ್ ಹಾಗೂ ಟಾಬ್ಯಾಗೋದ ಕಿರೋನ್ ಪೋಲಾರ್ಡ್ ,ಪಾಕಿಸ್ತಾನದ ಶಾಹಿದ್ ಆಫ್ರಿದಿ, ಉಮರ್ ಗುಲ್, ಮಹಮದ್ ಅಮೀರ್, ಇಂಗ್ಲೆಂಡ್ ನ ಮಾಂಟೆ ಪನೀಸರ್, ಜೇಮ್ಸ್ ಫೋಸ್ಟರ್, ಆಸ್ಟ್ರೇಲಿಯಾದ ಪೀಟರ್ ಸಿಡ್ಲ್, ಗೌಗ್ ಬೊಲಿಂಗರ್ ಮುಂತಾದವರು ಬಿಡ್ ನಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ.

ಆಟಗಾರರು ತಲಾ 50 ಸಾವಿರ ಡಾಲರ್‌ನಿಂದ ಒಂದು ಲಕ್ಷ ಡಾಲರ್‌ಗಳವರೆಗೆ ಬಿಕರಿಯಾಗಲಿದ್ದಾರೆಂದು ನಿರೀಕ್ಷಿಸಲಾಗಿದೆ.ಕಳೆದ ವರ್ಷ ಮುಂಬೈ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಆಟಗಾರರನ್ನು ಐಪಿಲ್ -3 ರಿಂದ ಹೊರಗಿಡುವುದಾಗಿ ಐಪಿಎಲ್ ಕಮೀಷನರ್ ಲಲೀತ್ ಮೋದಿ ಹೇಳಿದ್ದರು. ಆದರೆ, ಈಗ ಪಾಕಿಸ್ತಾನಿ ಆಟಗಾರರಿಗೂ ಹರಾಜಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X