ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವೇಷ ಬಿತ್ತುವ ಚಿಮೂ, ಭೈರಪ್ಪ : ಮರುಳುಸಿದ್ಧಪ್ಪ

By Staff
|
Google Oneindia Kannada News

Baraguru Ramachandrappa
ಬೆಂಗಳೂರು, ಜ. 18 : ಹಿಂದೂ ಮತೀಯವಾದಿ ನಿಲುವನ್ನು ದೃಢವಾಗಿ ಪ್ರತಿಪಾದಿಸುವ ಎಸ್ ಎಲ್ ಭೈರಪ್ಪ ಅವರ ಮತೀಯವಾದಿ ಚಿಂತನೆಯ ಕ್ರೌರ್ಯದ ಅಭಿವೃಕ್ತಿಯ ಜನಸಂಸ್ಕೃತಿಗೆ ಆಘಾತ ಎಂದು ಹಿರಿಯ ವಿಮರ್ಶಕ ಜಿ ಎಚ್ ನಾಯಕ್ ಹೇಳಿದರೆ, ಇಡೀ ಸಮುದಾಯವನ್ನು ದ್ವೇಷ ಅಸಹನೆಯ ನರಕಕ್ಕೆ ತಳ್ಳುವ ಕೆಲಸವನ್ನು ಭೈರಪ್ಪ, ಎಂ ಚಿದಾನಂದಮೂರ್ತಿ ಮಾಡುತ್ತಿದ್ದಾರೆಂದು ಹಿರಿಯ ಸಾಹಿತಿ ಕೆ ಮರುಳುಸಿದ್ಧಪ್ಪ ಅಭಿಪ್ರಾಯಪಟ್ಟಿದ್ದಾರೆ.

ಅಂಕಿತ ಪ್ರಕಾಶನ ಪ್ರಕಟಿಸಿದ ಬರಗೂರು ರಾಮಚಂದ್ರಪ್ಪ ಅವರ ಲೇಖನಗಳ ಸಂಗ್ರಹ 'ಮರ್ಯಾದಸ್ಥ ಮನುಷ್ಯರಾಗೋಣ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭೈರಪ್ಪ ಮತ್ತು ಚಿಮೂ ಅವರನ್ನು ಎಲ್ಲರೂ ತರಾಟೆಗೆ ತೆಗೆದುಕೊಂಡರು. ಭೈರಪ್ಪ ಸಾಮಾನ್ಯರಲ್ಲ. ಅಸಾಮಾನ್ಯ ಪ್ರತಿಭಾವಂತರು ಎಂದು ಕೊಂಡಾಡಿದ್ದು ಕೂಡ ಇದೇ ವೇದಿಕೆಯಲ್ಲೇ.

ಇಡೀ ಸಮುದಾಯವನ್ನು ದ್ವೇಷ, ಅಸಹನೆಗೆ ತಳ್ಳುವ ಚಿಂತನೆ ಅವರಲ್ಲೇಕಿದೆ ಎಂಬುದು ನಿಗೂಢ ರಹಸ್ಯ. ವೈಯಕ್ತಿಕ ಆಸೆ, ಕೀರ್ತಿಯ ಹಂಬಲ ಯಾವುದೂ ಇಲ್ಲದ ಚಿಮೂ ಅವರಿಗೆ 15 ದಿನಕ್ಕೊಮ್ಮೆ ಸ್ಕ್ರಿಜೋಫ್ರೇನಿಯಾಯಂದಹ ರೋಗ ಬಡಿದು ಬಿಡುತ್ತದೆ. ಕ್ರೈಸ್ತರು ಮತಾಂತರ ಮಾಡುತ್ತಾರೆ ಎಂದು ಬೊಬ್ಬೆ ಇಡುತ್ತಾರೆ. ಗೃಹ ಭಂಗ, ಪರ್ವದಂತಹ ಅಮೂಲ್ಯ ಕೃತಿಗಳನ್ನು ಕೊಟ್ಟ ಭೈರಪ್ಪ ಆವರಣ ಸುಳ್ಳಿನ ಕಂತೆ. ಕುತರ್ಕಗಳ ಒಣಪಾಂಡಿತ್ಯದ ಕೃತಿ. ಸನ್ನಿ ಅಥವಾ ಹುಚ್ಚು ಹಿಡಿದು ಮನುಷ್ಯರಿಗೆ ವಿವೇಕ, ತರತಮ ಜ್ಞಾನ ಇರುವುದಿಲ್ಲ ಎಂದು ನಾಟಕಕಾರ ಮರುಳಸಿದ್ಧಪ್ಪ ಟೀಕಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X