ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಲ್ಲಿ ಅಡುಗೆ ಅನಿಲ ಮಾಹಿತಿಗೆ ವೆಬ್‌ಸೈಟ್

By Staff
|
Google Oneindia Kannada News

Mysore LPG cylinder info goes online
ಮೈಸೂರು, ಜ.17: ಜಿಲ್ಲೆಯ ಒಟ್ಟು 26 ಕಂಪನಿಗಳಿಂದ 3,97,615 ಜನ ಅಡುಗೆ ಅನಿಲ ಸಂಪರ್ಕಹೊಂದಿದ್ದು, ಗ್ರಾಹಕರ ಅನುಕೂಲಕ್ಕಾಗಿ ಅನಿಲ ಸಿಲಿಂಡರ್‌ಗಳ ಲಭ್ಯತೆ ಮಾಹಿತಿಯನ್ನು www.mysore.nic.in/ಎಂಬ ಅಂತರ್ಜಾಲ ತಾಣದ ಮೂಲಕ ಪ್ರತಿದಿನ ಪ್ರಕಟಿಸಲಾಗುವುದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ಬೆಟ್‌ಸೂರಮಠ ತಿಳಿಸಿದರು.

ಗ್ಯಾಸ್ ಏಜೆನ್ಸಿಗಳವರು ಗ್ಯಾಸ್ ಸೇವೆ ಒದಗಿಸುವಲ್ಲಿ ಏನಾದರೂ ತೊಂದರೆ ಮಾಡಿದಲ್ಲಿ ಸಹಾಯವಾಣಿ 1077 ದೂರವಾಣಿ ಸಂಖ್ಯೆಗೆ ದೂರು ನೀಡಬಹುದೆಂದು ಹೇಳಿದರು. 5 ಕಿ.ಮೀ. ವ್ಯಾಪ್ತಿಯಲ್ಲಿ ಗ್ಯಾಸ್ ಸಂಪರ್ಕದಾರರಿಗೆ ಗ್ಯಾಸ್ ಸರಬರಾಜಿಗೆ ಯಾವುದೇ ಸರಬರಾಜು ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಅಡುಗೆ ಅನಿಲಗ್ರಾಹಕರು ತಮ್ಮ ಸುರಕ್ಷತೆ ದೃಷ್ಟಿಯಿಂದ ಆಗಿಂದಾಗ್ಗೆ ತಮ್ಮ ಗ್ಯಾಸ್ ಟ್ಯೂಬ್, ಸ್ಟೌವ್ ಇತ್ಯಾದಿಗಳ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಏಪ್ರಿಲ್ 2009ರಿಂದ ಇಲ್ಲಿಯವರೆಗೆ ದಾಳಿ ನಡೆಸಿ
278 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X