ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀರೂರು ಶ್ರೀ ಪರ್ಯಾಯಕ್ಕೆ ಕ್ಷಣಗಣನೆ

By * ವಿಕ ಸುದ್ದಿಲೋಕ
|
Google Oneindia Kannada News

Countdown Begins for the Solemn Bi-annual Udupi Paryaya
ಉಡುಪಿ,ಜ.17: ಶೀರೂರು ಮಠದ 30ನೇ ಯತಿ ಲಕ್ಷ್ಮೀವರತೀರ್ಥ ಶ್ರೀಪಾದರ ಮೂರನೇ ಪರ್ಯಾಯ ಪೀಠಾರೋಹಣಕ್ಕೆ ಒಂದೇ ದಿನ ಬಾಕಿಯಿದ್ದು, ದೇಶ-ವಿದೇಶಗಳಿಂದ ಭಕ್ತ ಸಾಗರ ಹರಿದುಬರುತ್ತಿದೆ. ಅಷ್ಟಮಠಗಳಲ್ಲೂ ದೂರದೂರಿನ ಭಕ್ತರು ಆಶ್ರಯ ಪಡೆದಿದ್ದು, ಹೋಟೆಲ್ ಗಳ ಕೊಠಡಿಗಳ್ಯಾವುದೂ ಖಾಲಿಯಿಲ್ಲ.ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಹೆಚ್ಚಿನ ಮನೆಗಳಲ್ಲಿ ದೂರದೂರಿನವರಿಗೆ ಆತಿಥ್ಯ ಸೌಲಭ್ಯವಿಲ್ಲದ ಕಾರಣ ವಸತಿ-ಆಶ್ರಯಕ್ಕಾಗಿ ಭಕ್ತರು ಪರದಾಡು ವಂತಾಗಿದೆ. ಅಲ್ಲಲ್ಲಿ ಅತ್ಯಾಕರ್ಷಕ ಸ್ವಾಗತ ಗೋಪುರ, ಕಮಾನು, ಕೇಸರಿ ತಳಿರು ತೋರಣ, ಪರ್ಯಾಯಕ್ಕೆ ಶುಭ ಕೋರುವ ಬ್ಯಾನರ್‌ಗಳು ಕಾಣುತ್ತಿವೆ. ನಗರದ ರಸ್ತೆ, ಸಂದಿ-ಗೊಂದಿ, ಆಯಕಟ್ಟಿನ ಜಾಗ 15 ಕೋಟಿ ರೂ. ಗಳಿಗೂ ಅಧಿಕ ವೆಚ್ಚದಲ್ಲಿ ಕಾಂಕ್ರೀಟ್, ಡಾಂಬರೀಕರಣಗೊಂಡಿದೆ. ರಥಬೀದಿಯಲ್ಲಿ ನಗರಸಭೆ ಸ್ವಚ್ಛತೆ ಕುರಿತು ಜನರ ಗಮನ ಸೆಳೆಯುವ ಮಳಿಗೆಯಿದೆ.

ರಥಬೀದಿ ಮತ್ತು ಪರಿಸರದ ಮನೆಗಳಿಗೆ ಕಸವನ್ನು ಮೂಲದಲ್ಲೇ ವಿಂಗಡಿಸುವ ನಿಟ್ಟಿನಲ್ಲಿ ಬಕೆಟ್‌ಗಳನ್ನೂ ನೀಡಲಾಗುತ್ತಿದೆ. ಶ್ರೀಕೃಷ್ಣ ಮಠ- ರಥಬೀದಿ ಪರಿಸರ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಪರ್ಯಾಯಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಸಪ್ತ ಮಠಗಳಿಗೆ ಶೀರೂರು ಮಠದಿಂದ ವಪೆ ಸಲ್ಲಿಸುವ ವಿಶಿಷ್ಟ ಪದ್ಧತಿ ಶನಿವಾರ ನಡೆಯಿತು. ಸಪ್ತ ರಥೋತ್ಸವ ಜ.17 ರಂದು ರಾತ್ರಿ 8ಕ್ಕೆ ಸಪ್ತ ರಥೋತ್ಸವ ಶ್ರೀಕೃಷ್ಣ ಮಠದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ 17ರಂದು ರಾತ್ರಿ ಉಡುಪಿಗೆ ಆಗಮಿಸಿ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಅಭಿನಂದನಾ ಸಮಾರಂಭ ಹಾಗೂ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಳ್ಳುವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X