ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಕಿ ಇಂಡಿಯಾಕ್ಕೆ ಮಟ್ಟೂ ಗುಡ್ ಬೈ

|
Google Oneindia Kannada News

A K Mattoo resigns as Hockey India President
ನವದೆಹಲಿ, ಜ. 17 : ಹಾಕಿ ಆಟಗಾರರ ಇತ್ತೀಚಿನ ವರ್ತನೆಯಿಂ ಬೇಸತ್ತಿರುವ ಎ ಕೆ ಮಟ್ಟೂ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಕ್ರೀಡಾ ಇಲಾಖೆ ಹೊಂದಿದ್ದ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನಕ್ಕೂ ಮಟ್ಟೂ ರಾಜೀನಾಮೆ ನೀಡಿದ್ದಾರೆ.

ಬಾರಿ ಹಣಕ್ಕೆ ಸಂಬಂಧಿಸಿದಂತೆ ಹಾಕಿ ಆಟಗಾರರು ಹಾಕಿ ಇಂಡಿಯಾದ ವಿರುದ್ಧ ಬಂಡೆದ್ದು ಪುಣೆಯಲ್ಲಿ ವಿಶ್ವಕಪ್ ಹಾಕಿ ಪಂದ್ಯಕ್ಕಾಗಿ ಏರ್ಪಡಿಸಲಾಗಿದ್ದ ಅಭ್ಯಾಸ ಪಂದ್ಯಕ್ಕೆ ಗೈರು ಹಾಜರಾಗಿದ್ದರು. ಇದು ಆಟಗಾರರು ಮತ್ತು ಹಾಕಿ ಇಂಡಿಯಾದ ಮಧ್ಯ ದೊಡ್ಡ ಕಂದಕವನ್ನೇ ಸೃಷ್ಟಿಸಿತ್ತು. ನಂತರ ಸಹಾರ ಇಂಡಿಯಾ ಸಂಸ್ಥೆ ಹಾಕಿ ಆಟಗಾರರಿಗೆ 1 ಕೋಟಿ ರುಪಾಯಿ ನೀಡುವ ಮೂಲಕ ಉಂಟಾಗಿದ್ದ ತಾತ್ಕಾಲಿಕ ಶಮನ ಮಾಡಿದ್ದರು. ನಂತರ ಉತ್ತರ ಪ್ರದೇಶ ಸರಕಾರ ಹಾಕಿ ಆಟಗಾರರಿಗೆ 5 ಕೋಟಿ ರುಪಾಯಿ ನೀಡಿತ್ತು. ಕ್ರಿಕೆಟ್ ಆಟಗಾರರು ಹಾಕಿ ಆಟಗಾರರಿಗೆ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದ್ದರು.

ರಾಜೀನಾಮೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಟ್ಟೂ, ಹಾಕಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ರಾಜೀನಾಮೆ ಪತ್ರವನ್ನು ಸುರೇಶ ಕಲ್ಮಾಡಿ ಅವರಿಗೆ ತಲುಪಿಸಿರುವೆ. ಜೊತೆಗೆ ಕ್ರೀಡಾ ಇಲಾಖೆಯ ಆಡಳಿತ ಮಂಡಳಿಯಲ್ಲಿ ಹೊಂದಿದ್ದ ವಿವಿಧ ಜವಾಬ್ದಾರಿಗಳಿಗೂ ರಾಜೀನಾಮೆ ನೀಡಲಾಗಿದೆ. ಕಳೆದ 40 ವರ್ಷಗಳಿದಂ ಕ್ರೀಡಾ ಇಲಾಖೆ ಸಲ್ಲಿಸಿದ ಸೇವೆ ಸಂತೃಪ್ತಿ ತಂದಿದೆ ಎಂದು ಹೇಳಿದರು. ಆದರೆ, ಇತ್ತೀಚೆಗೆ ಹಾಕಿ ಆಟಗಾರರು ವರ್ತಿಸಿದ ರೀತಿಯಿಂದ ನನಗೆ ಅತೀವ ನೋವು ತರಿಸಿದೆ ಎಂದು ಮಟ್ಟೂ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X