ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಇ ಮೇಲ್ ಬಗ್ಗೆ ಎಚ್ಚರ ವಹಿಸಲು ಸೂಚನೆ

|
Google Oneindia Kannada News

Govt warns against fake tax emails
ನವದೆಹಲಿ, ಜ.16: ಅಂತರ್ಜಾಲದಲ್ಲಿ ಬರುವ ನಕಲಿ ಇ-ಮೇಲ್ ಗಳಿಗೆ ಪಾನ್ ಕಾರ್ಡ್ ಸಂಖ್ಯೆ ಹಾಗೂ ಕ್ರೆಡಿಟ್ ಕಾರ್ಡ್ ನ ಯಾವುದೇ ವಿವರಗಳನ್ನು ನೀಡದಿರುವಂತೆ ತೆರಿಗೆದಾರರಿಗೆ ತೆರಿಗೆ ಇಲಾಖೆ ಎಚ್ಚರಿಸಿದೆ.

'ತೆರಿಗೆ ಮರುಪಾವತಿ' ಹಾಗೂ 'ಮರುಪಾವತಿಗೆ ಮನವಿ' ಎಂಬ ತಲೆಬರಹದಡಿ ಹಲವು ನಕಲಿ ಇ ಮೇಲ್ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಈ ಸೂಚನೆಯನ್ನು ನೀಡಿದೆ. ಈ ರೀತಿಯ ನಕಲಿ ಇ ಮೇಲ್ ಗಳ ಬಗ್ಗೆ ತೆರಿಗೆದಾರರು ಎಚ್ಚರವಹಿಸಬೇಕು ಎಂದು ತೆರಿಗೆ ಅಧಿಕಾರಿಗಲು ತಿಳಿಸಿದ್ದಾರೆ.

[email protected], [email protected] ಮತ್ತು [email protected] ಎಂಬ ವಿಳಾಸಗಳಿಂದ ಬಂದ ಇ ಮೇಲ್ ಗಳಿಗೆ ಉತ್ತರಿಸದಿರುವಂತೆ ಎಚ್ಚರಿಕೆ ನೀಡಲಾಗಿದೆ. ಮರುಪಾವತಿ ಕುರಿತು ತೆರಿಗೆ ಇಲಾಖೆ ಯಾರಿಗೂ ಇ ಮೇಲ್ ಗಳನ್ನು ಕಳುಹಿಸುವುದಿಲ್ಲ. ತೆರಿಗೆದಾರರಿಂದ ಅವರ ಪಾನ್ ಸಂಖ್ಯೆಯಾಗಲಿ, ಕ್ರೆಡಿಟ್ ಕಾರ್ಡ್ ನ ವಿವರಗಳಾಗಲಿ ಕೇಳುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X