ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಲಚೇತನರನ್ನು ಕಾಪಾಡಿದ ಗುಲಬರ್ಗಾ ಜಿಲ್ಲಾಡಳಿತ

|
Google Oneindia Kannada News

Gulbarga dist admin bans half burrying children in mud
ಗುಲಬರ್ಗಾ, ಜ. 15 : ಶತಮಾನದ ಸುದೀರ್ಘ ಕಂಕಣ ಸೂರ್ಯಗ್ರಹಣ ಸಂಭವಿಸುತ್ತಿರುವ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ವಿಕಲಚೇತನರನ್ನು ಮಣ್ಣಿನಲ್ಲಿ ಹೂಳುವ ಕೆಟ್ಟ ಸಂಪ್ರದಾಯಕ್ಕೆ ತಡೆಹಾಕಿದೆ.

ಕಳೆದ ವರ್ಷ ಜುಲೈ 23ರಂದು ಸೂರ್ಯಗ್ರಹಣ ಸಂಭವಿಸಿದ್ದಾಗ ನೂರಾರು ಅಮಾಯಕ ಮಕ್ಕಳನ್ನು ಕುತ್ತಿಗೆಮಟ್ಟ ಮಣ್ಣಿನಲ್ಲಿ ಅನೇಕರು ಹೂತಿದ್ದರು. ಈ ಕ್ರಿಯೆಯನ್ನು ಅಂದಿನ ಕಾಂಗ್ರೆಸ್ ಶಾಸಕ ಖಮರುಲ್ ಇಸ್ಲಾಂ ಸಮರ್ಥಿಸಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಇಂಥ ಮೂಢನಂಬಿಕೆಗೆ ಮುಂದೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಈಗ ತಮ್ಮ ಭರವಸೆಯನ್ನು ಮುಖ್ಯಮಂತ್ರಿ ಉಳಿಸಿಕೊಂಡಿದ್ದಾರೆ.

ಸೂರ್ಯಗ್ರಹಣ ಸಂಭವಿಸುತ್ತಿರುವಾಗ ವಿಕಲಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತರೆ ಅವರ ಬುದ್ಧಿಮಾಂದ್ಯತೆ ಸರಿಹೋಗುತ್ತದೆಂಬ ನಂಬಿಕೆ ಜನರಲ್ಲಿ ಇಂದಿಗೂ ಮನೆಮಾಡಿದೆ. ಹೆಚ್ಚಾಗಿ ಮುಸ್ಲಿಂ ಸಮುದಾಯದ ಜನ ಈ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಮಣ್ಣಲ್ಲಿ ಅರ್ಧ ಹೂತುಹೋಗಿದ್ದ ಮಕ್ಕಳು ಕಿರುಚಾಡುತ್ತಿದ್ದರೂ ಕಳೆದ ವರ್ಷ ಮಕ್ಕಳನ್ನು ಹೂಳು ಕ್ರಿಯೆ ಮುಂದುವರಿಸಿದ್ದರು. ಜಿಲ್ಲಾಡಳಿತವೂ ಇದಕ್ಕೆ ಪರೋಕ್ಷವಾಗಿ ಅವಕಾಶ ನೀಡಿತ್ತು.

ಜಿಲ್ಲಾಡಳಿತ ಈ ವಿಕೃತ ಸಂಪ್ರದಾಯಕ್ಕೇನೋ ಕೊನೆಹಾಡಿದೆ. ಆದರೆ, ಜನರ ಮನಸಿಗೆ ಹಿಡಿದಿರುವ ಗ್ರಹಣಕ್ಕೆ ಮುಕ್ತಿ ಎಂದು?

ವಿಡಿಯೋ : ಶತಮಾನದ ಸುದೀರ್ಘ ಸೂರ್ಯಗ್ರಹಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X