ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುರುವಾಗಿದೆ ಕಂಕಣ ಸೂರ್ಯಗ್ರಹಣ

|
Google Oneindia Kannada News

All eyes on millennium's solar spectacle
ಬೆಂಗಳೂರು, ಜ. 15 : ಶತಮಾನದ ಸುದೀರ್ಘ ಸೂರ್ಯಗ್ರಹಣ ಬರೋಬ್ಬರಿ 11.6 ರಿಂದ ಆರಂಭವಾಗಿದ್ದು, ಖಗೋಳದಲ್ಲಿ ನಡೆಯುತ್ತಿರುವ ಈ ಅಪರೂಪ ವಿಸ್ಮಯ ವೀಕ್ಷಿಸಲು ನಗರದ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಕಂಕಣ ಸೂರ್ಯಗ್ರಹಣ ನೋಡಲು ಜಮಾಯಿಸಿದ್ದಾರೆ.

ಸಹಸ್ರಮಾನದ ಕೌತುಕ ಇದಾಗಿದ್ದು, ನೆಹರು ತಾರಾಲಯಯ ಬಳಿ ನೆರೆದಿರುವ ವಿದ್ಯಾರ್ಥಿಗಳು ಪ್ರಕಾರ, ಸೂರ್ಯ ಗ್ರಹಣ ನೋಡಿ ತುಂಬಾ ಸಂತೋಷವಾಯಿತು. ಶೇ. 20 ರಷ್ಟು ಸೂರ್ಯನಿಗೆ ಕಂಕಣ ಉಂಟಾಗಿದೆ ಎಂದು ನೆರದಿದ್ದ ವಿದ್ಯಾರ್ಥಿನಿಯೊಬ್ಬಳು ಅನಿಸಿಕೆಯಾಗಿದೆ. ಸೂರ್ಯಗ್ರಹಣ ನೋಡಲು ಕುಟುಂಬದೊಂದಿಗೆ ಬಂದಿದ್ದೇವೆ. ಅಪರೂಪದ ಕ್ಷಣವನ್ನು ಸೂರ್ಯಗ್ರಹಣ ನೋಡಿದ್ದು ಸಂತೋಷ ಸಂಗತಿ, ಇದರಿಂದ ಯಾವ ತೊಂದರೆಗಳು ಆಗುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳ ಮಾತಿದೆ.

ವಿಡಿಯೋ:ಶತಮಾನದ ಸುದೀರ್ಘ ಸೂರ್ಯಗ್ರಹಣ

ಆರಂಭದ ವರದಿಗಳ ಪ್ರಕಾರ ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಶಿವಮೊಗ್ಗ, ತುರುವೇಕೆರೆ, ಭದ್ರಾವತಿಯಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದರಿಂದ ಸೂರ್ಯಗ್ರಹಣದ ಕಂಕಣ ಅಲ್ಲಿನ ಜನ ನೋಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜನ ನಿರಾಶೆ ಹೊಂದಿದ್ದಾರೆ.

ಮೂಢನಂಬಿಕೆ ಬೇಡ

ಗ್ರಹಣದಿಂದ ಯಾವುದೇ ಅಪಾಯ ಇಲ್ಲ. ಗ್ರಹಣದ ವೇಳೆ ಆಹಾರ ಸೇವಿಸಬಹುದು. ಇದರಿಂದ ಭ್ರೂಣಕ್ಕೆ ಅಪಾಯವಿಲ್ಲ. ಗ್ರಹಣದ ವೇಳೆ ಯಾವುದೇ ಹೊಸ ಕಿರಣ ಹೊರಬೀಳುವುದಿಲ್ಲ. ಹೀಗಾಗಿ, ಮನೆಯಲ್ಲಿ ಸಂಗ್ರಹಿಸಿಟ್ಟ ನೀರು, ಪದಾರ್ಥವನ್ನು ಹೊರಚೆಲ್ಲುವ ಅಗತ್ಯವಿಲ್ಲ ಎನ್ನುವುದು ವಿಜ್ಞಾನಿಗಳ ವಾದ. ಆದರೆ, ಗ್ರಹಣವನ್ನು ಬರೀಗಣ್ಣಿನಿಂದ ಮಾತ್ರ ನೋಡಬಾರದು ಎನ್ನುವುದು ಅವರ ಪ್ರಥಮ ಎಚ್ಚರಿಕೆಯಾಗಿದೆ. ಗ್ರಹಣ ವೀಕ್ಷಿಸಲು ಫಿಲ್ಟರ್ ಗಳು, ಕಲರ್ ಫಿಲ್ಟರ್ ಗಳು, ಸಿಲ್ವರ್ ಅಂಶ ಹೊಂದಿರದ ಕಪ್ಪು ಬಿಳುಪು ಫಿಲ್ಮ್ ಬಳಸಿದ ಏಕ್ಸರೇ ಉಪಯೋಗಿಸಬಹುದು. ಇವು ಸೂರ್ಯನ ಪ್ರಖರತೆ ಕುಗ್ಗಿಸಲು ಸಹಾಯ ಮಾಡುತ್ತದೆ ಎಂದು ಡಾ ಅರುಣ್ ಸಂಪ್ರತಿ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X