ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಸೂರ್ಯಗ್ರಹಣ ವೀಕ್ಷಿಸಿದ ಜನತೆ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Students in Shivamogga watch Solar eclipse
ಸಹಸ್ರಮಾನದ ಸುದೀರ್ಘ ಕಂಕಣ ಸೂರ್ಯಗ್ರಹಣವನ್ನು ಅತ್ಯಂತ ಸಂತಸ ಮತ್ತು ಕೌತುಕದಿಂದ ಶಿವಮೊಗ್ಗದ ನೂರಾರು ಜನರು ಶುಕ್ರವಾರ ವೀಕ್ಷಿಸಿದರು.

ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು, ಶಾಲಾಮಕ್ಕಳು, ಸಾರ್ವಜನಿಕರು ಸೂರ್ಯ ಕನ್ನಡಕ, ಫೋಟೋ ನೆಗೆಟೀವ್, ಎಕ್ಸರೆ ಶೀಟುಗಳನ್ನು ಉಪಯೋಗಿಸಿ ಗ್ರಹಣವನ್ನು ವೀಕ್ಷಿಸುತ್ತಿದ್ದುದು ಸಾಮಾನ್ಯವಾಗಿತ್ತು. ರೋಟರಿ ಶಾಲೆಯಲ್ಲಿ ಮಕ್ಕಳಿಗೆ ಕಂಕಣ ಸೂರ್ಯಗ್ರಹಣ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಶಿಕ್ಷಕರ ಮಾರ್ಗದರ್ಶನದಲ್ಲಿ ಗ್ರಹಣವನ್ನು ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ವೀಕ್ಷಿಸಿದರು.

ನಗರದಲ್ಲಿದ್ದ ಇಂಧನ ಸಚಿವ ಈಶ್ವರಪ್ಪರವರ ನಿವಾಸದಲ್ಲಿ ಇಂದು ಸೂರ್ಯಗ್ರಹಣದ ಅಂಗವಾಗಿ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಭಕ್ತರು ಪಾಲ್ಗೊಂಡಿದ್ದರು. ನಗರದಾದ್ಯಂತ ಜನಸಂಚಾರ ವಿರಳವಾಗಿತ್ತು. ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದವು. ಬಾಣಂತಿಯರು, ಗರ್ಭಿಣಿಯರು ಹೊರಗೆ ಬರಲಿಲ್ಲ. ನಗರದ ಅನೇಕ ಹೋಟೆಲ್ ಗಳಲ್ಲಿ ಜನಸಾಂದ್ರತೆ ಕಡಿಮೆ ಇತ್ತು. ಗ್ರಾಮಾಂತರ ಪ್ರದೇಶಗಳಲ್ಲೂ ಗ್ರಹಣ ವೀಕ್ಷಿಸಿದ್ದು, ವಿಶೇಷವಾಗಿತ್ತು. ಕಚೇರಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳದಲ್ಲಿ ಗ್ರಹಣದ ಬಗ್ಗೆಯೇ ಚರ್ಚಿಸುತ್ತಿದುದು ಸಾಮಾನ್ಯವಾಗಿತ್ತು.

ಶತಮಾನದ ಸುದೀರ್ಘ ಸೂರ್ಯಗ್ರಹಣ ಬರೋಬ್ಬರಿ 11 ಗಂಟೆ 6 ನಿಮಿಷಕ್ಕೆ ಆರಂಭವಾಯಿತು. ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಿಸಿ ನಲಿದಾಡಿದರು. ಸೂರ್ಯಗ್ರಹಣ ನೋಡಲು ಕುಟುಂಬದೊಂದಿಗೆ ಬಂದಿದ್ದೇವೆ. ಅಪರೂಪದ ಕ್ಷಣವನ್ನು ಸೂರ್ಯಗ್ರಹಣ ನೋಡಿದ್ದು ಸಂತೋಷದ ಸಂಗತಿ. ಇದರಿಂದ ಯಾವ ತೊಂದರೆಗಳು ಆಗುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ವಿಡಿಯೋ: ಸೌರವ್ಯೂಹದ ಮನಮೋಹಕ ಚಮತ್ಕಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X