ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ : ಈದ್ಗಾ ಮೈದಾನ ಪಾಲಿಕೆ ಸ್ವತ್ತು

|
Google Oneindia Kannada News

Hubli Idgah Maidan
ಹುಬ್ಬಳ್ಳಿ, ಜ. 14 : ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ವಿರುದ್ಧ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿದೆ.

ಈ ಮೂಲಕ ಅದು ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಂತಾಗಿದೆ. ಪರಿಣಾಮವಾಗಿ ಈದ್ಗಾ ಮೈದಾನದಲ್ಲಿ ವರ್ಷಕ್ಕೆ 2 ಬಾರಿ ಮಾತ್ರ ನಮಾಜ್ ಮಾಡಲು ಮುಸ್ಲಿಂ ಬಾಂಧವರಿಗೆ ಅವಕಾಶ ಇದ್ದು, ಮಿಕ್ಕಂತೆ ಈ ಮೈದಾನ ಪಾಲಿಕೆಯ ಸ್ವತ್ತಾಗಿರಲಿದೆ. ಜತೆಗೆ ಅಂಜುಮನ್ ಸಂಸ್ಥೆ ಮೈದಾನದಲ್ಲಿ ಈಗಾಗಲೇ ನಿರ್ಮಿಸಿರುವ ಕೆಲವು ಕಟ್ಟಡಗಳನ್ನು ೪೫ ದಿನಗಳಲ್ಲಿ ಖಾಲಿ ಮಾಡಬೇಕಾಗಿದೆ.

ಅಂಜುಮನ್ ಸಂಸ್ಥೆ ಈದ್ಗಾ ಮೈದಾನದಲ್ಲಿ ವರ್ಷಕ್ಕೆರಡು ಬಾರಿ ನಮಾಜು ಮಾಡಲು ಮಾತ್ರ 999 ವರ್ಷದ ಪರವಾನಗಿ ಹೊಂದಿದೆ. ಅದಕ್ಕಿಂತ ಹೆಚ್ಚಿನ ಹಕ್ಕೇನೂ ಇಲ್ಲ ಎಂದು ದಳವೀರ್ ಭಂಡಾರಿ ಹಾಗೂ ಪಟ್ನಾಯಕ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಕೊನೆಯ ಹಂತದಲ್ಲಿಯೂ ಅಂಜುಮನ್ ಸಂಸ್ಥೆಗೆ ಮೇಲ್ಮನವಿ ಹಿಂದಕ್ಕೆ ಪಡೆಯುವ ಅವಕಾಶ ನೀಡಲಾಯಿತು. ಅದಕ್ಕೆ ಸಂಸ್ಥೆ ವಕೀಲರು ಒಪ್ಪದ ಪರಿಣಾಮವಾಗಿ ನ್ಯಾಯಮೂರ್ತಿಗಳು ಅದರ ಮನವಿಯನ್ನು ತಿರಸ್ಕರಿಸಿದರು.

ಈ ನಡುವೆ ವಕ್ಫ್ ಬೋರ್ಡ್ ವತಿಯಿಂದ ವಕೀಲರು ಈದ್ಗಾ ಮೈದಾನ ವಕ್ಫ್ ಆಸ್ತಿ ಎಂದು ವಾದಿಸಲು ಯತ್ನಿಸುವ ಮೂಲಕ ಪ್ರಕರಣ ಇನ್ನಷ್ಟು ದಿನ ಮುಂದೆ ಹೋಗುವಂತೆ ಮಾಡಲು ಯತ್ನಿಸಿದರು. ಆದರೆ ನ್ಯಾಯಮೂರ್ತಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಬದಲಾಗಿ ನಿಮಗೆ ಬೇಕಾದರೆ ನಾವು ಕೆಳ ನ್ಯಾಯಾಲಯದ ತೀರ್ಪನ್ನು ವ್ಯಾಖ್ಯಾನಿಸಿ ನಂತರ ತೀರ್ಪು ನೀಡುತ್ತೇವೆ. ಇಲ್ಲವಾದಲ್ಲಿ ನೀವು ಕಾನೂನು ಪ್ರಕಾರ ಜಾಗವನ್ನು ಮಹಾನಗರ ಪಾಲಿಕೆಗೆ ಹಿಂದಿರುಗಿಸಿ, ನಂತರ ಬಂದು ಅರ್ಜಿ ಹಾಕಿ. ಆಗ ಬೇಕಾದರೆ ಅದನ್ನು ಪರಿಗಣಿಸೋಣ' ಎಂದರು. ಅದಕ್ಕೆ ಅಂಜುಮನ್ ಸಂಸ್ಥೆ ಪರ ವಕೀಲರು ಸಮ್ಮತಿಸಲಿಲ್ಲ.

ಅಂಜುಮನ್ ವಕೀಲರು ಈದ್ಗಾ ಸ್ಥಳದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರೂ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಯಾವುದೇ ಹೊಸ ಆದೇಶ ನೀಡದೆ, ಅಂಜುಮನ್ ಸಂಸ್ಥೆಯ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ ಎಂದಷ್ಟೇ ಆದೇಶಿಸಿದರು. ಕೊನೆಯ ಹಂತದಲ್ಲಿ ವಿಚಲಿತರಾದಂತೆ ಕಂಡುಬಂದ ಅಂಜುಮನ್ ಸಂಸ್ಥೆ ವಕೀಲರು ಈಗಾಗಲೇ ನಿರ್ಮಿಸಿರುವ ಕಟ್ಟಡ ತೆರವು ಮಾಡದಂತೆ' ಕೂಡ ಮನವಿ ಮಾಡಲಿಲ್ಲ. ಈದ್ಗಾ ಮೈದಾನದ ಮಾಲೀಕತ್ವ ಅಂಜುಮನ್ ಸಂಸ್ಥೆಗಿಲ್ಲ ಎಂಬ ನಿಲುವನ್ನು ನ್ಯಾಯಾಲಯ ಮೊದಲೇ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X