ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಕುಂಭಮೇಳಕ್ಕೆ ಹರಿದ್ವಾರ ಸಂಪೂರ್ಣ ಸಜ್ಜು

|
Google Oneindia Kannada News

Mahakumbhamela
ಅಲಹಾಬಾದ್, ಜ. 13 : ಹಿಂದೂಗಳ ಪವಿತ್ರ ಹಬ್ಬ ಎಂದೇ ಪರಿಗಣಿಸಲ್ಪಟ್ಟಿರುವ ಪೂರ್ಣ ಮಹಾಕುಂಭಮೇಳದ ಆಚರಣೆಗೆ ಹರಿದ್ವಾರ ಸಂಪೂರ್ಣ ಸಿದ್ಧತೆಗೊಂಡಿದೆ. ಪ್ರತಿ 12 ವರ್ಷಕ್ಕೊಮ್ಮೆ ಆಚರಿಸುವ ಈ ಮಹಾಕುಂಭಮೇಳ ನಾಳೆಯಿಂದ 45 ಕಾಲ ನಡೆಯಲಿದೆ. ಮಹಾಕುಂಭಮೇಳಕ್ಕೆ ಭಾರತ ಸೇರಿದಂತೆ ಜಗತ್ತಿನ ವಿವಿಧ ಪ್ರದೇಶಗಳಿಂದ ಭಕ್ತರು ಜನ ಸಮೂಹ ಹರಿದು ಬರುತ್ತಲಿದ್ದು, ಈಗಾಗಲೇ ಪವಿತ್ರ ಗಂಗಾ ನದಿ ತಟದಲ್ಲಿರುವ ದೇವಾಲಯಗಳ ನಗರಿ ಹರಿದ್ವಾರ ಮತ್ತು ಹೃಷಿಕೇಶದಲ್ಲಿ ಲಕ್ಷಾಂತರ ಭಕ್ತರು ಜಮಾಯಿಸಿದ್ದಾರೆ.

ದೇಶದ ಮೂಲೆಮೂಲೆಗಳಿಂದ ಸಾಧು ಸಂತರು ಮುಖ್ಯವಾಗಿ ನಾಗಾ ಸಾಧುಗಳು ಹರಿದ್ವಾರ ತಲುಪಿದ್ದು, ಮಕರ ಸಂಕ್ರಾಂತಿ ದಿನದಂದು ಸೂರ್ಯ ತನ್ನ ನಡೆಯನ್ನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಕಡೆಗೆ ದಿಕ್ಕು ಬದಲಿಸುತ್ತಾನೆ. ಈ ಪವಿತ್ರ ಗಳಿಗೆಯಲ್ಲಿ ಕೋಟ್ಯಂತರ ಹಿಂದೂಗಳು ಪವಿತ್ರ ಗಂಗಾ ನದಿಯಲ್ಲಿ ಮಿಂದೇಳುತ್ತಾರೆ. ಎಂಟು ಲಕ್ಷ ಭಕ್ತರು ಹರಿದ್ವಾರ ತಲುಪಿದ್ದಾರೆ ಎಂದು ಅಂದಾಜಿಸಲಾಗಿದೆ.

ಮಹಾಕುಂಭಮೇಳಕ್ಕೆ ಸಂಬಂಧಿಸಿದಂತೆ ವ್ಯಾಪಕ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. 10 ಸಾವಿರಕ್ಕೂ ಪೊಲೀಸರನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಹಿತಕರ ಘಟನೆಗಳನ್ನು ತಪ್ಪಿಸಲು ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಮೇಳದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲು ನಿರ್ಧರಿಸಿದೆ.

ವಿಡಿಯೋ: ಮಹಾಕುಂಭಮೇಳಕ್ಕೆ ಹರಿದು ಬಂದ ಜನಸಾಗರ

ಪ್ರತಿ ಮೂರು ವರ್ಷಕ್ಕೊಮ್ಮೆ ಅರ್ಧ ಕುಂಭಮೇಳವನ್ನು ಆಚರಿಸಲಾಗುತ್ತಿದೆ. ಪೂರ್ಣ ಕುಂಭಮೇಳವನ್ನು ಜಗತ್ತಿನಲ್ಲಿ ನಡೆಯುವ ಅತ್ಯಂತ ದೊಡ್ಡ ಭಕ್ತರ ಮೇಳ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೇಳವನ್ನು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಆಚರಿಸಲಾಗುತ್ತಿದ್ದು, ಅರ್ಧ ಕುಂಭಮೇಳಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸಲಾಗುವುದು. ಈ ಸಾರಿ ಹರಿದ್ವಾರದಲ್ಲಿ ನಡೆಯಲಿರುವ ಮೇಳ ಪೂರ್ಣ ಕುಂಭಮೇಳವಾಗಿದ್ದು, ಭಾರಿ ಪ್ರಮಾಣದ ಭಕ್ತರು ಸೇರುವ ನಿರೀಕ್ಷೆಯಿದೆ.

ಭಾರತದ ನಾಲ್ಕು ನಗರಗಳಲ್ಲಿ ಮಹಾಕುಂಭಮೇಳವನ್ನು ಆಚರಿಸಲಾಗುತ್ತಿದ್ದು, 2010ರ ಪೂರ್ಣ ಕುಂಭಮೇಳವನ್ನು ಗಂಗಾ ನದಿ ದಂಡೆಯಲ್ಲಿರುವ ಹಿಮಾಲಯ ಶಿಖರಗಳ ಕೆಳಗಿರುವ ಹರಿದ್ವಾರದಲ್ಲಿ ಆಚರಿಸಲಾಗುತ್ತಿದೆ. ಅಲಹಾಬಾದ್ ನ ಪ್ರಯಾಗ್, ಉಜ್ಜೈನಿ ಮತ್ತು ನಾಸಿಕ್ ನಲ್ಲಿಯೂ ಸಹ ಮಹಾಮೇಳವನ್ನು ಆಚರಿಸಲಾಗುತ್ತದೆ. 12 ವರ್ಷಕ್ಕೊಮ್ಮೆ ಪೂರ್ಣಕುಂಭಮೇಳವನ್ನು ಆಚರಿಸಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X