ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತೆಗೆ ನೋವಾಗಿದ್ದರೆ ಕ್ಷಮೆ: ದೇವೇಗೌಡ

By Staff
|
Google Oneindia Kannada News

HD Devegowda
ಬೆಂಗಳೂರು, ಜ. 11 : ನಾನು ಬಳಸಿದ ಪದದಿಂದ ರಾಜ್ಯದ ಜನತೆಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಭಾನುವಾರ ರಾತ್ರಿ ಸುವರ್ಣ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ವಿರುದ್ಧ ದೇವೇಗೌಡರು ಪ್ರಯೋಗಿಸಿರುವ ಕೆಳಮಟ್ಟದ ಪದದಿಂದ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದು, ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ವಿಡಿಯೋ: ಗೌಡರ ವಿರುದ್ಧ ಬಿಜೆಪಿ ಕಾನೂನು ಸಮರ

ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ರೈತರು ನೈಸ್ ಕಚೇರಿ ಎದುರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ದೇವೇಗೌಡ, ಯಡಿಯೂರಪ್ಪ ಅವರು ರಾಜ್ಯ ಮುಖ್ಯಮಂತ್ರಿ ಎಂಬುದನ್ನು ಮರೆತು ವಾಚಾಮಗೋಚರವಾಗಿ ನಿಂದಿಸಿದ್ದರು. ಯಾವನ್ರೀ ಅವ್ನು ಮುಖ್ಯಮಂತ್ರಿ ಬ್ಲಡಿ ಬಾಸ್ಟರ್ಡ್ ಎಂಬ ಪದವನ್ನು ಪ್ರಯೋಗಿಸಿದ್ದರು. ಗೌಡರ ಪದಕ್ಕೆ ರಾಜ್ಯಾದ್ಯಂತ ಟೀಕೆ, ಟಿಪ್ಪಣಿಗಳು, ಆಕ್ರೋಶಗಳು ವ್ಯಕ್ತವಾಗಿದ್ದವು.

ಮುಂದಾಗುವ ಅನಾಹುತವನ್ನು ಅರಿತ ದೇವೇಗೌಡ ಸುವರ್ಣ ಚಾನೆಲ್ ಗೆ ಬಂದು ನಾನು ಹಾಗೆ ಅಂದಿಲ್ಲ ಒಂದು ಸಲ ಹೇಳಿದರೆ, ಇನ್ನೊಂದು ಸಲ ನಾನು ಅಂದಿದ್ದು ರಾಜ್ಯದ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿಗೆ, ಇನ್ನೊಮ್ಮೆ ನಾನು ಬಳಸಿದ ಪದಕ್ಕೆ ರಾಜ್ಯದ ಜನತೆಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದರು. ನೈಸ್ ವಿರುದ್ದದ ನನ್ನ ಹೋರಾಟ ಮುಂದುವರೆಯಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಭಾನುವಾರ ಸಂಚಿಕೆಯಲ್ಲಿ ಮುಖಪುಟದಲ್ಲಿ ಪ್ರಕಣವಾದ ವರದಿ "ಗೌಡರ ವಿರುದ್ಧ ರೈತರ ರಣಕಹಳೆ" ಹಾಗೂ ಭಾನುವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ನನ್ನ ವಿರುದ್ಧ ಹಗುರವಾಗಿ ಮಾತಾನಾಡಿದ್ದರಿಂದ ಆಕ್ರೋಶಗೊಂಡು ಬಾವೋದ್ವೇಗಕ್ಕೆ ಒಳಗಾಗಿದ್ದೆ. ಈ ಸಂದರ್ಭದಲ್ಲಿ ಮಾತನಾಡಿರಬಹುದು ಎಂದು ಗೌಡರು ಹೇಳಿದರು. ಸಿಎಂ ಯಡಿಯೂರಪ್ಪ, ಎಜಿ ಅಶೋಕ ಹಾರನಹಳ್ಳಿ ಮತ್ತು ವಕೀಲ ದಿವಾಕರ್ ವಿರುದ್ಧ ಗೌಡರು ಬೆಂಕಿ ಕಾರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X