ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವನ್ರಿ ಅವ್ನು ಸಿಎಂ ಬ್ಲಡಿ ಬಾಸ್ಟರ್ಡ್!: ದೇವೇಗೌಡ

|
Google Oneindia Kannada News

ಬೆಂಗಳೂರು, ಜ. 10 : ನೈಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ನಡುವಿನ ರಾಜಕೀಯ ಸಮರ ಮತ್ತಷ್ಟು ತಾರಕಕ್ಕೇರಿದೆ. ಟೀಕೆ ಟಿಪ್ಪಣಿಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಸುಮಾರು 40 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ದೇವೇಗೌಡ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ "ಯಾವನ್ರಿ ಅವ್ನು ಸಿಎಂ ಬ್ಲಡಿ ಬಾಸ್ಟರ್ಡ್! ಮಾನ ಮಾರ್ಯಾದೆ ಇದೆ ಅವನಿಗೆ, ದೇವೇಗೌಡನ್ನ ಏನೂ ಅಂತ ತಿಳಿದುಕೊಂಡಿದ್ದಾನೆ" ಎಂದು ಏಕವಚನದಲ್ಲಿ ಅವಾಚ್ಯ ಶಬ್ಧಗಳಿಂದ ಜರಿದಿದ್ದಾರೆ. ದೇವೇಗೌಡರ ಈ ಹೇಳಿಕೆಗೆ ನೋವಾಗಿದೆ ಸಿಎಂ ಹೇಳಿದರೆ, ಗೌಡರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಬಿಜೆಪಿ ಲೇವಡಿ ಮಾಡಿದೆ.

ನೈಸ್ ಕಂಪನಿಗೆ ಹೆಚ್ಚು ಭೂಮಿ ನೀಡಿರುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಇಂದು ಹೊಸೂರು ರಸ್ತೆಯ ಚಿಕ್ಕತೋಗೂರಿನಲ್ಲಿರುವ ನೈಸ್ ಕಚೇರಿ ಎದುರು ರೈತಸಂಘ, ರೈತರೊಂದಿಗೆ ಪ್ರತಿಭಟನೆ ನಡೆಸಿದ ಗೌಡರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಚಿಕ್ಕತೋಗೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೈಸ್ ಕಂಪನಿ ಅಗತ್ಯಕ್ಕಿಂತ ಹೆಚ್ಚುವರಿ ಭೂಮಿ ನೀಡಲು ಸರಕಾರ ಹಸಿರು ನಿಶಾನೆ ತೋರಿಸಿದೆ. ರಾಜ್ಯದ ಅಡ್ವೋಕೇಟ್ ಜನರಲ್ ಸುಪ್ರೀಂಕೋರ್ಟ್ ಗೆ ನೀಡಿದ ತಪ್ಪು ಮಾಹಿತಿಯಿಂದ ಅಮಾಯಕ ರೈತರು ಭೂಮಿಯನ್ನು ಕಳೆದುಕೊಳ್ಳುವ ಹಂತ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ದೇವೇಗೌಡ, ಈ ಸಿಎಂಗೆ ಮಾನ ಮಾರ್ಯಾದೆ ಇದೆಯೇನ್ರಿ, ರೈತರಿಗೆ ಮೋಸ ಮಾಡಿ ಖೇಣಿಯೊಂದಿಗೆ ಡಕಾಯಿತಿ ನಡೆಸಿದ್ದಾರೆ. ಯಾವನ್ರೀ ಅವ್ನು ಯಡಿಯೂರಪ್ಪ...ಬ್ಲಡಿ ಬಾಸ್ಟರ್ಡ್ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಸಂಯುಕ್ತ ಕರ್ನಾಟಕ ಮುಖಪುಟದಲ್ಲಿ ಬಂದಿರುವ 'ಗೌಡರ ವಿರುದ್ಧ ರಣಕಹಳೆ' ಎಂಬ ವರದಿಗೆ ತೀವ್ರ ಆಕ್ರೋಶಗೊಂಡ ಗೌಡರು, ಈ ಪತ್ರಿಕೆ ಹಾರನಹಳ್ಳಿ ರಾಮಸ್ವಾಮಿ ಮಗಂದು, ನನ್ನ ಹೋರಾಟ ಕುಂದಿಸಲು ಪ್ರಯತ್ನ ನಡೆಸಿದ್ದಾರೆ, ದೇವೇಗೌಡ ಹುಟ್ಟಿರುವುದೇ ಹೋರಾಟಕ್ಕೆ ಇಂಥವರಿಗ ಬಗ್ಗುವುದಿಲ್ಲ ಎಂದು ಹೇಳಿದರು.

ಇಂದಿನಿಂದ ನನ್ನ ಅಧಿಕೃತ ಹೋರಾಟ ಆರಂಭವಾಗಿದೆ. ಚಿಕ್ಕತೋಗೂರು ನೈಸ್ ಕಚೇರಿ ನಾಳೆ ಒಂದು ದಿನ ಹೋರಾಟ ನಡೆಸುವೆ. ನಂತರ ಯಡಿಯೂರಪ್ಪ ಮನೆಯ ಮುಂದೆ ಹೋರಾಟ ನಡೆಸುವೆ ಎಂದು ದೇವೇಗೌಡ ಹೇಳಿದರು. ದೇವೇಗೌಡರ ಕೆಳಮಟ್ಟದ ಹೇಳಿಕೆ ಕಾಂಗ್ರೆಸ್ ಕೂಡಾ ಗಾಬರಿ ವ್ಯಕ್ತಪಡಿಸಿದೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಯಾರೇ ಆದರೂ ಅಸಂವಿಧಾನಿಕವಾಗಿರುವ ಪದ ಬಳಿಕೆ ಸರಿಯಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಬ್ಲಡಿ ಬಾಸ್ಟರ್ಡ್ ಪದಕ್ಕೆ ಪ್ರಯೋಗಕ್ಕೆ ಬೇಸರ, ಸಿಎಂ

ಬ್ಲಡಿ ಬಾಸ್ಟರ್ಡ್ ಎಂಬ ಪದ ಪ್ರಯೋಗ ಮಾಡಿರುವುದಕ್ಕೆ ತೀವ್ರ ಬೇಸರವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 40 ವರ್ಷ ರಾಜಕೀಯ ಮಾಡಿರುವ ದೇವೇಗೌಡರ ಬಾಯಿಯಿಂದ ಈ ಮಾತು ಬರಬಾರದಿತ್ತು, ಇದು ತೀವ್ರ ನೋವು ತರುವ ಸಂಗತಿಯಾಗಿದೆ. ಗೌಡರು ಬಳಸಿದ ಭಾಷೆಯನ್ನು ನಾನು ಬಳಸುವುದಿಲ್ಲ. ಅವರ ಬಗ್ಗೆ ಅಪಾರ ಗೌರವವಿದೆ. ಮಾಜಿ ಪ್ರಧಾನಿಗಳು ಘನತೆಗೆ ತಕ್ಕಂತೆ ವರ್ತಿಸಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನೈಸ್ ವಿಷಯಕ್ಕೆ ಸಂಬಂಧಿಸಿದಂತೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡುವ ವಿಷಯವೇನಿದೆ. ಪ್ರಕರಣಕ್ಕೆ ಚಾಲನೆ ನೀಡಿದ್ದು ಈ ದೇವೇಗೌಡ. ಇದೀಗ ಪ್ರಕರಣ ಸುಪ್ರಿಂಕೋರ್ಟ್ ನಲ್ಲಿದೆ. ನ್ಯಾಯಾಲಯದ ತೀರ್ಪಿನ ಮೇರೆಗೆ ಸರಕಾರ ನಡೆದುಕೊಂಡಿದೆ. ಈ ಪ್ರಕರಣದಲ್ಲಿ ನಮ್ಮ ಸರಕಾರ ಅತ್ಯಂತ ಪಾರದರ್ಶಕವಾಗಿದೆ. ವೇದಿಕೆಯಲ್ಲಿ ಚರ್ಚೆ ಮಾಡುವುದು ಏನಿಲ್ಲ. ಬನ್ನಿ ದೇವೇಗೌಡರೆ, ನೈಸ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಳಿ ತೆರಳಿ ಚರ್ಚಿಸೋಣ ಎಂದು ಪ್ರತಿ ಸವಾಲು ಹಾಕಿದರು. ದೇವೇಗೌಡರ ವರ್ತನೆಯನ್ನು ರಾಜ್ಯದ ಜನ ವೀಕ್ಷೀಸುತ್ತಿದ್ದಾರೆ. ಹೀಗೆ ಮಾಡುವುದರಿಂದ ಬಿಬಿಎಂಪಿ ಚುನಾವಣೆಯಲ್ಲಿ ಏನಾದರೂ ಲಾಭ ಆಗುವುದಿಲ್ಲ. ಸೂಕ್ತ ಸಮಯದಲ್ಲಿ ಅವರಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ದೇವೇಗೌಡರನ್ನ ಆಸ್ಪತ್ರೆಗೆ ಸೇರಿಸಿ, ಧನಂಜಯ್ ಕುಮಾರ್

ದೇವೇಗೌಡರ ಕೀಳು ಪದಕ್ಕೆ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಧನಂಜಯ್ ಕುಮಾರ್, ದೇವೇಗೌಡರಿಗೆ ವಯಸ್ಸಾಗಿದೆ. ಮಾನಸಿಕ ಸ್ಥಿತಿ ಸಮತೋಲನದಲ್ಲಿಲ್ಲ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿ ಎಂದು ಲೇವಡಿ ಮಾಡಿದರು. ಮಾಜಿ ಸಿಎಂ, ಪಿಎಂ ಆಗಿದ್ದವರ ಬಾಯಿಯಲ್ಲೇ ಮುಖ್ಯಮಂತ್ರಿಯೊಬ್ಬರನ್ನು ಹೇಗೆ ಟೀಕಿಸಬೇಕು ಎಂಬ ಸೌಜನ್ಯವೂ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X