ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ವಕೀಲರ ಸಂಘಗಳಿಗೂ ಇ- ಗ್ರಂಥಾಲಯ

By Staff
|
Google Oneindia Kannada News

Suresh Kumar
ಬೆಂಗಳೂರು, ಜ. 10: ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೂ ಇ- ಗ್ರಂಥಾಲಯ ಒದಗಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ತಿಳಿಸಿದರು. ನಗರದಲ್ಲಿ ಶನಿವಾರ ನಡೆದ ರಾಜ್ಯ ವಕೀಲರ ಸಂಘಗಳ ಅಧ್ಯಕ್ಷರು, ಕಾರ್ಯ ದರ್ಶಿಗಳ ಸಮಾವೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ, ಸಂಘಗಳ ಪಾತ್ರ ಕುರಿತು ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರ ಕಾರ್ಯವನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಇ- ಗ್ರಂಥಾ ಲಯ ಸ್ಥಾಪಿಸುವ ಯೋಜನೆ ಹಮ್ಮಿ ಕೊಳ್ಳಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದರು. ರಾಜ್ಯದ ಹಲವು ಜಿಲ್ಲಾ ನ್ಯಾಯಾಲಯದ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಉಡುಪಿ, ಪೊನ್ನಂಪೇಟೆ, ಶೃಂಗೇರಿ, ಶಿಡ್ಲಘಟ್ಟ ,ಮಧುಗಿರಿ ಮತ್ತಿತರರ ಸ್ಥಳಗಳಲ್ಲಿನ ನ್ಯಾಯಾಲಯಗಳ ಸುಧಾರಣೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಅವುಗಳ ಪುನರ್ ನಿರ್ಮಾಣ ಅಥವಾ ಸ್ಥಳಾಂತರಕ್ಕೆ ಸರ್ಕಾರ 170 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.

ನ್ಯಾಯಾಲಯಗಳಲ್ಲಿ ವಕೀಲರು ಹಲವು ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸುವ ಜತೆಗೆ ವಕೀಲರ ಕಷ್ಟಕಾಲಕ್ಕಾಗಿ ನಿಗದಿತ ಹಣಕಾಸಿನ ಭದ್ರತೆ ಒದಗಿಸಬೇಕು. ಸಮಾಜದ ವಿವಿಧ ವಿಭಾಗಗಳಂತೆ ವಕೀಲರಿಗೂ ವಿಶೇಷ ಕೋಟಾದಡಿಯಲ್ಲಿ ವಿಧಾನ ಪರಿಷತ್ ಸದಸ್ಯತ್ವ ನೀಡಬೇಕು ಎಂದುಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಪುಟ್ಟೇಗೌಡ ಸಚಿವರನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ರವಿ. ಬಿ. ನಾಯಕ್, ವಕೀಲರ ಹಾಗೂ ನ್ಯಾಯಮೂರ್ತಿಗಳ ಸಂಬಂಧ ಸೌಹಾರ್ದಯುತವಾಗಿದ್ದಾಗ ಮಾತ್ರ ಉತ್ತಮ ನ್ಯಾಯದಾನ ಸಾಧ್ಯ ಎಂದರು.ಕರ್ನಾಟಕ ರಾಜ್ಯ ವಕೀಲರ ಸಂಘದ ಅಧ್ಯಕ್ಷ ಅಬ್ದುಲ್ ರಿಯಾಜ್ ಖಾನ್ ಸೇರಿದಂಎತ್ ಸಂಘದ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X