ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಯುವಕನಿಗೆ ಬೆಂಕಿ ಇಟ್ಟ ಆಸೀಸ್

|
Google Oneindia Kannada News

Another youth attacked in OZ
ಮೆಲ್ಬೋರ್ನ್, ಜ. 9 : ಭಾರತೀಯ ಮೂಲದ ವ್ಯಕ್ತಿ ಹತ್ಯೆಗೀಡಾಗ ವಾರದಲ್ಲಿಯೇ ಮತ್ತೊಬ್ಬ ಭಾರತೀಯ ಯುವಕನ ಮೇಲೆ ನಾಲ್ವರು ಆಸ್ಟ್ರೇಲಿಯನ್ನರು ದಾಳಿ ನಡೆಸಿದ್ದಾರೆ. 29 ವರ್ಷದ ಹೆಸರು ಹೇಳಲಿಚ್ಛಿಸದ ಯುವಕನನ್ನು ಬೆಳಗಿನ ಜಾವದಲ್ಲಿ ಬೆಂಕಿ ಹಚ್ಚಿ ಸುಡಲಾಗಿದೆ. ಆದರೆ, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೆಲ್ಬೋರ್ನ್ ನ ಎಸ್ಸೆಂಡನ್ ಪ್ರದೇಶದಲ್ಲಿ ಭಾರತೀಯ ಯುವಕನ ಮೇಲೆ ತೈಲ ಸುರುವಿ ಬೆಂಕಿ ಹಚ್ಚಿದ್ದಾರೆ. ಆತನ ಶೇ. 15ರಷ್ಟು ಭಾಗ ಸುಟ್ಟಿದೆ. ಕೈ, ಎದೆ ಮತ್ತು ಕುತ್ತಿಗೆ ಮೇಲೆ ಸುಟ್ಟ ಗಾಯಗಳಾಗಿವೆ. ಆತನನ್ನು ಆಲ್ಫ್ರೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ನೈರುತ್ಯ ಭಾಗದಲ್ಲಿ ಕಳೆದ ರಾತ್ರಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವಕ ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಹೆಂಡತಿಯನ್ನು ಮನೆಗೆ ಬಿಟ್ಟು ಕಾರನ್ನು ಪಾರ್ಕ್ ಮಾಡುತ್ತಿದ್ದಾಗ ಭಾರತೀಯನ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಆತನನ್ನು ಹಿಂದಕ್ಕೆ ತಳ್ಳಿ ತೈಲವೊಂದನ್ನು ಸುರುವಿ ಲೈಟರ್ ಬಳಸಿ ಬೆಂಕಿ ಹಚ್ಚಿದ್ದಾರೆ, ನಂತರ ಪರಾರಿಯಾಗಿದ್ದಾರೆ.

ಕಳೆದ ವಾರವಷ್ಟೇ 21ರ ಹರೆಯದ ಭಾರತೀಯ ವಿದ್ಯಾರ್ಥಿ ನಿತಿನ್ ಗರ್ಗ್ ಅವರನ್ನು ಹೊಟೇಲೊಂದರಲ್ಲಿ ಪಾರ್ಟ್ ಟೈಂ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಯಾರ್ವಿಲ್ಲೆಯಲ್ಲಿ ಚಾಕುವಿನಿಂದ ಚುಚ್ಚಿ ಹತ್ಯೆಗೈಯಲಾಗಿತ್ತು. ನಡುರಾತ್ರಿಯಲ್ಲಿ ಪಾರ್ಟಿ ಮುಗಿಸಿ ಅಥವಾ ಕೆಲಸದಿಂದ ಮರಳುತ್ತಿದ್ದಾಗ ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹಲ್ಲೆಗಳಾಗುತ್ತಿವೆ. ಇದಕ್ಕೆ ಜನಾಂಗೀಯ ನಿಂದನೆಯ ಲೇಪ ಹಚ್ಚಬೇಡಿ ಎಂದು ಆಸ್ಟ್ರೇಲಿಯಾ ಸರಕಾರ ಕೂಗು ಹಾಕುತ್ತಿದ್ದರೂ ದಾಳಿ ಅವ್ಯಾಹತವಾಗಿ ಮುಂದುವರಿಯುತ್ತಲೇ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X