ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಬಳಿಗೊಂದು ಹೋಮಿಯೋಪತಿ ಆಸ್ಪತ್ರೆ

By Staff
|
Google Oneindia Kannada News

Medical Education minister Ramachandra Gowda
ಬೆಂಗಳೂರು, ಜ.9: ಹೋಬಳಿಗೊಂದು ಹೋಮಿಯೋಪತಿ ಚಿಕಿತ್ಸಾಲಯವನ್ನು ಪ್ರಾರಂಭಿಸಲಾಗುವುದೆಂದು ವೈದ್ಯಕೀಯ ಸಚಿವ ರಾಮಚಂದ್ರಗೌಡ ಅವರು ತಿಳಿಸಿದ್ದಾರೆ. ಕೇಂದ್ರ ಹಾಗು ರಾಜ್ಯ ಆಯುಷ್ ನಿರ್ದೇಶನಾಲಯ ಜಂಟಿಯಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ "ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಹೋಮಿಯೋಪತಿ ಪಾತ್ರ" ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.

ಹೋಬಳಿಗೊಂದು ಹೋಮಿಯೋಪತಿ ಆಸ್ಪತ್ರೆ ಸ್ಥಾಪಿಸುವಷ್ಟು ಸಂಖ್ಯೆಯಲ್ಲಿ ಯೋಮಿಯೋಪತಿ ವೈದ್ಯರುಗಳು ಇರುವುದರಿಂದ ಗ್ರಾಮೀಣ ಜನರಿಗೆ ಹೋಮಿಯೋಪತಿ ಚಿಕಿತ್ಸೆ ದೊರಕುವಂತಾಗಬೇಕು. ಈ ದೃಷ್ಟಿಯಿಂದ ಹೋಬಳಿಗೊಂದು ಚಿಕಿತ್ಸಾಲಯವನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸಮಾಜಕ್ಕೆ ಆರೋಗ್ಯವಂತ ಜನಾಂಗವನ್ನು ನೀಡುವಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯಿಂದ ಸಾಧ್ಯವಿದೆ. ಹೋಮಿಯೋಪತಿ ವೈದ್ಯಕೀಯ ಸೀಟುಗಳನ್ನು 40 ರಿಂದ 100 ಸೀಟುಗಳಿಗೆ ಏರಿಸಲಾಗುವುದಲ್ಲದೆ ಸರ್ಕಾರದ ಅನುದಾನದಲ್ಲೆ 100 ಮಂದಿ ಹೋಮಿಯೋಪತಿ ವೈದ್ಯರನ್ನು ಸಮಾಜಕ್ಕೆ ನೀಡಲಾಗುವುದೆಂದರು.

ಒಂದು ಸಾವಿರ ಬಿಲಿಯನ್ ಡಾಲರ್ ಹಣವನ್ನು ವೈದ್ಯಕೀಯ ಔಷಧಿಗಳ ತಯಾರಿಕೆಗೆ ಖರ್ಚುಮಾಡಲಾಗುತ್ತಿದ್ದರೆ. ಅವರಲ್ಲಿ ಶೇ 1 ರಷ್ಟು ಮಾತ್ರ ಹೋಮಿಯೋಪತಿ ಔಷಧಿಗಳ ತಯಾರಿಕೆಗೆ ಖರ್ಚು ಮಾಡಲಾಗುತ್ತಿದೆ. ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ಔಷಧಿಗಳನ್ನು ಬಳಸುವಂತೆ ಜನರಿಗೆ ಪ್ರೇರಣೆ ನೀಡಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ ಸಾರ್ವಜನಿಕರಿಗೆ ಹೋಮಿಯೋಪತಿ ಚಿಕಿತ್ಸೆ ಬಗ್ಗೆ ಮಾಹಿತಿಯ ಕೊರತೆ ಇದೆ. ಅಲ್ಲದೆ ಈ ವೈದ್ಯಕೀಯ ಚಿಕಿತ್ಸೆಯಲ್ಲಿ ಜನರಿಗೆ ವಿಶ್ವಾಸ ಮೂಡಿಸುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು. ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೋಮಿಯೋಪತಿ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ದೊರಕುವಂತೆ ಮಾಡಿ ಅದರ ಫಲಿತಾಂಶವನ್ನು ಸಾರ್ವಜನಿಕರಿಗೆ ತಿಳಿಸಿ ಹೋಮಿಯೋಪತಿ ವೈದ್ಯಕೀಯ ಔಷಧಿಗಳ ಮೇಲೆ ನಂಬಿಕೆ ಬರುವಂತೆ ಮಾಡಬೇಕು ಎಂದರು.

ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ ಬಿ.ಟಿ. ರುದ್ರೇಶ್ ಅವರು ಹೋಮಿಯೋಪತಿ ಔಷಧಿಗಳ ಪರಿಣಾಮಗಳ ಬಗ್ಗೆ ವಿವರಿಸುತ್ತಾ ಹೋಮಿಯೋಪತಿ ತಂತ್ರಜ್ಞಾನದಿಂದ ದೂರವಾಗಿರುವ ಗ್ರಾಮೀಣ ಜನರಿಗೆ ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆ ದೊರಕುವಂತಾಗಬೇಕು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X